ಪ್ರಕಟವಾಯ್ತು 2023ರ IPL ವೇಳಾಪಟ್ಟಿ! ಮೊದಲ ಮ್ಯಾಚ್‌ ಗುಜರಾತ್‌ Vs ಚೆನ್ನೈ!

masthmagaa.com:

2023ರ IPLನ ವೇಳಾಪಟ್ಟಿ ಪ್ರಕಟವಾಗಿದೆ. ಮಾರ್ಚ್‌ 31ಕ್ಕೆ ಈ ಮೆಗಾ ಟೂರ್ನಿ ಆರಂಭವಾಗಲಿದ್ದು, ಮೇ 28ಕ್ಕೆ ಟೂರ್ನಿಯ ಅಂತಿಮ ಪಂದ್ಯ ನಡೆಯಲಿದೆ. 52 ದಿನಗಳ ಕಾಲ ನಡೆಯಲಿರುವ ಈ ಕ್ರಿಕೆಟ್‌ ಟೂರ್ನಿಯಲ್ಲಿ 10 ತಂಡಗಳು ಪೈಪೋಟಿ ನೀಡೋಕೆ ರೆಡಿಯಾಗಿವೆ. ಇನ್ನು ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಗುಜರಾತ್‌ ಟೈಟನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ನ್ನ ಎದುರಿಸಲಿದೆ. ಇತ್ತ RCB ಏಪ್ರಿಲ್‌ 2ರಂದು ತನ್ನ ಮೊದಲ ಮ್ಯಾಚ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಆಡಲಿದೆ.

-masthmagaa.com

Contact Us for Advertisement

Leave a Reply