ಪರ್ಷಿಯನ್‌ ಕೊಲ್ಲಿಯಲ್ಲಿ ಶಾಂತಿ ಕಾಪಾಡಲು ಇರಾನ್‌ ಬದ್ದ: ಭಾರತ!

masthmagaa.com:

ಪರ್ಷಿಯನ್‌ ಕೊಲ್ಲಿಯಲ್ಲಿ ಶಾಂತಿ ಕಾಪಾಡಲು ಸ್ಥಿರವಾದ ಶಕ್ತಿಯಾಗಿ ನಿಂತಿರೋ ಇರಾನ್‌ ಸೇನೆಯ ಪಾತ್ರ ತುಂಬಾ ಮಹತ್ವದ್ದಾಗಿದೆ ಅಂತ ಇಂಡಿಯನ್‌ ಮಿಲಟರಿ ಇಂಟಲಿಜೆನ್ಸಿ ಚೀಫ್‌ ಲೆಫ್ಟಿನಂಟ್‌ ಜನರಲ್‌ R.S ರಮನ್‌ ಹೇಳಿದ್ದಾರೆ. ದಿಲ್ಲಿಯ ಇರಾನ್‌ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಇರಾನ್‌ ಸೇನಾ ದಿನದ ಕಾರ್ಯಕ್ರಮದಲ್ಲಿ ಈ ವಿಚಾರವನ್ನ ತಿಳಿಸಿದ್ದಾರೆ. ಇರಾನ್‌ ಮತ್ತು ಭಾರತಗಳೆರಡು ಒಂದರ ಬೆನ್ನಿಗೊಂದು ನಿಂತಿವೆ. ಜೊತೆಗೆ ನಾರ್ತ್‌ ಸೌತ್‌ ಟ್ರಾನ್ಸ್‌ಪೋರ್ಟ್‌ ಕಾರಿಡಾರ್‌(INSTC) ಮತ್ತು ಇರಾನ್‌ನ ಚಹಬಹಾರ್‌ನಲ್ಲಿರೊ ಶಾಹಿದ್‌ ಬೆಹೆಶ್ಟಿ ಬಂದರು ಉಭಯ ದೇಶಗಳ ನಡುವಿನ ಸಹಕಾರದ ವಿಶಿಷ್ಟ ಲಕ್ಷಣವಾಗಿದೆ ಅಂತ ರಮನ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply