ಪ್ಯಾಲಸ್ತೀನ್‌ ಸ್ಥಾಪನೆ! ಇಸ್ರೇಲ್‌ ವಿರೋಧ, ಅಮೆರಿಕ ಬದ್ಧ!

masthmagaa.com:

ಗಾಜಾ ಯುದ್ಧದ ನಂತ್ರ ಅಫೀಶಿಯಲ್ ಪ್ಯಾಲಸ್ತೀನ್‌ ಸ್ಥಾಪಿಸ್ಬೇಕು ಅನ್ನೋ ವಿಚಾರದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಮಧ್ಯೆ ಭಿನ್ನಾಭಿಪ್ರಾಯಗಳೀರೋದು ಗೊತ್ತಾಗ್ತಿದೆ. ಪ್ಯಾಲಸ್ತೀನ್‌ನ್ನ ಸ್ವತಂತ್ರ ದೇಶವಾಗಿಸೋ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹುಗೆ ಕಾಲ್‌ ಮಾಡಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ನಂತ್ರ ರಿಯಾಕ್ಟ್‌ ಮಾಡಿರೋ ಬೈಡೆನ್‌, ʻಪ್ಯಾಲಸ್ತೀನ್‌ ಸ್ಥಾಪಿಸೋಕೆ ನೆತನ್ಯಾಹು ಕಂಪ್ಲೀಟ್‌ ಆಗಿ ವಿರೋಧಿಸ್ತಿಲ್ಲ. ಇದಕ್ಕೆ ಹಲವಾರು ಮಾರ್ಗಗಳಿವೆ. ಸೇನೆ ಇಲ್ಲದ ಸರ್ಕಾರವನ್ನ ರಚಿಸಿದ್ರೆ ಪ್ಯಾಲಸ್ತೀನ್‌ ಸ್ವತಂತ್ರವಾಗೋಕೆ ಸಾಧ್ಯʼ ಅಂದಿದ್ದಾರೆ. ಆದ್ರೆ ಶುಕ್ರವಾರವಷ್ಟೇ ಈ ಬಗ್ಗೆ ಮಾತಾಡಿದ್ದ ನೆತನ್ಯಾಹು, ʻಇದು ಸಾಧ್ಯವಿಲ್ಲ. ನಾನು ವಿರೋಧಿಸ್ತೀನಿ. ಈ ರೀತಿ ಮಾಡಿದ್ರೆ ಪ್ಯಾಲಸ್ತೀನ್‌ ಭದ್ರತೆಗೆ ಗ್ಯಾರಂಟಿ ಇರಲ್ಲʼ ಅಂದಿದ್ರು. ಜೊತೆಗೆ ಈ ವಿಚಾರವಾಗಿ ಅಮೆರಿಕ ಮುಂದ್ಹೋಗದಂತೆ ತಡಿತೀವಿ ಅಂತಾನೂ ಹೇಳಿದ್ರು. ಇನ್ನು ಅತ್ತ ದಕ್ಷಿಣ ಗಾಜಾ ಪಟ್ಟಿಯಲ್ಲಿರೋ ಖಾನ್‌ ಯೂನಿಸ್‌ನ ಆಸ್ಪತ್ರೆಯ ಮೇಲೆ ಇಸ್ರೇಲ್‌ ದಾಳಿ ನಡೆಸಿದೆ. ಪರಿಣಾಮ ಅಲ್ಲಿನ ಸೀಮಿತ ಹೆಲ್ತ್‌ಕೇರ್‌ ಸೌಲಭ್ಯಗಳಿಗೆ ಡ್ಯಾಮೇಜ್‌ ಆಗಿದೆ. ಇಸ್ರೇಲಿ ಡ್ರೋನ್‌ಗಳು ಅಲ್ಲಿನ ಅಲ್‌-ಅಮಲ್‌ ಆಸ್ಪತ್ರೆಯಲ್ಲಿರೋ ನಾಗರಿಕರ ಮೇಲೆ ಮತ್ತು ನೆರವು ಏಜೆನ್ಸಿಯ ಮೂಲಗಳನ್ನ ಟಾರ್ಗೆಟ್‌ ಮಾಡ್ತಿವೆ. ಇದ್ರಿಂದ ಹಲವಾರು ಜನರು ಗಾಯಗೊಂಡಿದ್ದಾರೆ ಅಂತ ರೆಡ್‌ ಕ್ರಿಸೆಂಟ್‌ ಸಂಸ್ಥೆ ಹೇಳಿದೆ. ಇನ್ನು ಇಸ್ರೇಲ್‌ ಪಡೆಗಳು ಹೆಚ್ಚೆಚ್ಚು ಕ್ರೌಡೆಡ್‌ ಪ್ರದೇಶಗಳ ಕಡೆ ಮೂವ್‌ ಆಗ್ತಿರೋದ್ರಿಂದ, ಹೆಚ್ಚೆಚ್ಚು ಜನರು ಪ್ರಾಣ ಕಳ್ಕೊಳ್ಳೋ ಸಾಧ್ಯತೆ ಇದೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply