ಹಮಾಸ್‌ಗಳಿಗೆ ಡೆಡ್‌ಲೈನ್:‌ ರಂಜಾನ್‌ ಒಳಗೆ ಹಾಸ್ಟೆಜಸ್‌ ರಿಲೀಸ್‌ ಆಗ್ಬೇಕು!

masthmagaa.com:

ಗಾಜಾ ಯುದ್ದಕ್ಕೆ ಸಂಬಂಧಪಟ್ಟಂತೆ ಇಸ್ರೇಲ್‌ ಹಮಾಸ್‌ಗಳಿಗೆ ಡೆಡ್‌ಲೈನ್‌ ಕೊಟ್ಟಿದೆ. ರಂಜಾನ್‌ ಹಬ್ಬದ ಒಳಗೆ ಹಮಾಸ್‌ ಬಂಧಿಸಿರೋ ಇಸ್ರೇಲಿ ಜನರನ್ನ ಬಿಡುಗಡೆ ಮಾಡ್ಲಿಲ್ಲ ಅಂದ್ರೆ ಗಾಜಾದ ರಫಾ ಮೇಲೆ ತೀವ್ರ ದಾಳಿ ನಡೆಸೋದಾಗಿ ಇಸ್ರೇಲ್‌ ಬಿಗ್ ವಾರ್ನಿಂಗ್‌ ನೀಡಿದೆ. ಮೂರುವಾರಗಳಲ್ಲಿ ಮುಸ್ಲಿಮರ ಪವಿತ್ರ ತಿಂಗಳು ರಂಜಾನ್‌ ಶುರುವಾಗುತ್ತೆ. ಅದ್ರ ಒಳಗೆ ಉಳಿದ ಹಾಸ್ಟೇಜ್‌ಗಳು ರಿಲೀಸ್‌ ಆಗ್ಬೇಕು. ಇಲ್ಲಾಂದ್ರೆ ನಮ್ಮ ಸೈನಿಕರು ರಫಾದ ಪ್ರತಿ ಮೂಲೆಗೂ ರೀಚ್‌ ಆಗ್ತಾರೆ. ಹಮಾಸ್‌ ನಾಯಕ ಹಾಗೂ ಪ್ರಪಂಚಕ್ಕೆ ನಾವು ಈಗಲೇ ಇದನ್ನ ಹೇಳ್ತಿದ್ದೀವಿ ಅಂತ ಇಸ್ರೇಲ್‌ ಹೇಳಿದೆ.

-masthmagaa.com

Contact Us for Advertisement

Leave a Reply