ಹಮಾಸ್‌ ವಶದಲ್ಲಿರೋ ಇಸ್ರೇಲ್‌ ಮಹಿಳೆಯರ ಬಗ್ಗೆ ಆತಂಕಕಾರಿ ಮಾಹಿತಿ!

masthmagaa.com:

ಹಮಾಸ್‌ ವಿರುದ್ದದ ಯುದ್ದದಲ್ಲಿ ಇಸ್ರೇಲ್‌ ಹೊಸ ವಿಚಾರವೊಂದನ್ನ ಬಹಿರಂಗ ಪಡಿಸಿದೆ. ಹಮಾಸ್‌ ಉಗ್ರರ ವಶದಲ್ಲಿರೋ ಇಸ್ರೇಲ್‌ನ ಕೆಲವು ಮಹಿಳಾ ಒತ್ತೆಯಾಳುಗಳು ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯರಾಗಿದ್ರು. ಈಗ ಅವ್ರು ಮಕ್ಕಳನ್ನ ಉಳಿಸಿಕೊಳ್ಬೇಕೋ ಅಥ್ವಾ ರಿಲೀಸ್‌ ನಂತರ ಗರ್ಭಪಾತ ಮಾಡಿಸ್ಬೇಕೋ ಬೇಡ್ವೋ ಅನ್ನೋದನ್ನ ಅವರೇ ನಿರ್ಧಾರ ಮಾಡ್ತಾರೆ ಅನ್ನೋ ರಿಪೋರ್ಟ್‌ ಬಂದಿದೆ. ಇಸ್ರೇಲ್‌ನಲ್ಲಿ ಅಬಾರ್ಶನ್‌ ಮಾಡಿಸ್ಬೇಕು ಅಂದ್ರೆ ಅದಕ್ಕೆ ಅಂತಾನೆ ಇರೋ ಆಯೋಗದಿಂದ ಅಪ್ರೂವಲ್‌ ಪಡೀಬೇಕು. ಆದ್ರೆ ಈಗ ಆ ರೂಲ್ಸ್‌ನ್ನ ಬದಿಗೊತ್ತಿ ಮಹಿಳೆಯರಿಗೆ ಚಾಯ್ಸ್‌ ನೀಡಲಾಗುತ್ತೆ ಅಂತೇಳಲಾಗ್ತಿದೆ. ಅಂದ್ಹಾಗೆ ಮಹಿಳೆಯರು, ಮಕ್ಳಳು ಸೇರಿದಂತೆ 130ಕ್ಕೂ ಹೆಚ್ಚು ಜನ್ರು ಈಗಲೂ ಹಮಾಸ್‌ ವಶದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply