ಇಸ್ರೇಲ್​​ನಲ್ಲಿ ಅಮೆರಿಕ ಮಾದರಿಯಲ್ಲಿ ಹಿಂಸಾಚಾರ?

masthmagaa.com:

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸೋತ ಬಳಿಕ ಅವರ ಬೆಂಬಲಿಗರು ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ನಡೆಸಿ, ಹಿಂಸಾಚಾರ ಮಾಡಿದ್ರು. ಆದ್ರೆ ಈಗ ಇಸ್ರೇಲ್​​ನಲ್ಲೂ ಅದೇ ರೀತಿಯಾಗುತ್ತಾ ಅನ್ನೋ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಮತ್ತು ಆಂತರಿಕ ಭದ್ರತಾ ಸಂಸ್ಥೆ ಶಿನ್​ಬೆಟ್​ ಮುಖ್ಯಸ್ಥ ನದವ್ ಅರ್ಗಮನ್ ನೀಡಿರೋ ಹೇಳಿಕೆ.. ಇತ್ತೀಚೆಗಷ್ಟೇ ಬೆಂಜಮಿನ್ ನೆತಾನ್ಯಹು ಕೆಳಗಿಳಿಸೋಕೆ ಅಂತಲೇ ವಿಪಕ್ಷಗಳೆಲ್ಲಾ ಒಗ್ಗಟ್ಟಾಗಿ ಮೈತ್ರಿ ಮಾಡ್ಕೊಂಡು ಸರ್ಕಾರ ರಚನೆಯ ಪ್ರಸ್ತಾವನೆ ಮುಂದಿಟ್ಟಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಪ್ರಧಾನಿ ಬೆಂಜಮಿನ್ ನೆತಾನ್ಯಹು, ವಿಪಕ್ಷಗಳ ಮೈತ್ರಿ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದಿ ಗ್ರೇಟೆಸ್ಟ್ ಎಲೆಕ್ಷನ್ ಫ್ರಾಡ್ ಅಂತ ಕರೆದಿದ್ದಾರೆ. ಶನಿವಾರವಷ್ಟೇ ಆಂತರಿಕ ಭದ್ರತಾ ಸಂಸ್ಥೆ ಶಿನ್​ಬೆಟ್​ ಮುಖ್ಯಸ್ಥ ನದವ್ ಅರ್ಗಮನ್, ದೇಶದಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಪ್ರೇರಿತ ಹಿಂಸಾಚಾರ ನಡೆಯೋ ಸಾಧ್ಯತೆ ಇದೆ ಅಂತ ಸಾರ್ವಜನಿಕವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ನಮ್ಮಲ್ಲಿ ಇಂಟಲಿಜೆನ್ಸ್ ಬ್ಯೂರೋ ಹೇಗೋ ಅದೇ ರೀತಿ ಇಸ್ರೇಲ್​​ನಲ್ಲಿ ಶಿನ್​​ಬೆಟ್ ಇದೆ.. ಹೀಗಾಗಿ 12 ವರ್ಷಗಳ ಕಾಲ ಇಸ್ರೇಲ್ ಪ್ರಧಾನಿಯಾಗಿದ್ದ ಬೆಂಜಮಿನ್ ನೆತಾನ್ಯಹು ಅಧಿಕಾರ ಹಸ್ತಾಂತರ ವೇಳೆ ಹಿಂಸಾಚಾರ ನಡೆಯಬಹುದು ಅನ್ನೋ ಆತಂಕ ಎದುರಾಗಿದೆ. ಫೇಸ್​ಬುಕ್​​ನಲ್ಲಿ ಪೋಸ್ಟ್​ ಒಂದನ್ನು ಹಾಕಿರೋ ಬೆಂಜಮಿನ್ ನೆತಾನ್ಯಹು, ರಾಜಕೀಯ ಶತ್ರುಗಳನ್ನು ಧರ್ಮಗ್ರಂಥದ ಘಟನೆಯೊಂದಕ್ಕೆ ಹೋಲಿಸಿದ್ದಾರೆ. ಮೋಸೆಸ್ ಅಂದ್ರೆ ಪ್ರವಾದಿ ಕಾನಾನ್ ಅನ್ನೋ ಪ್ರದೇಶಕ್ಕೆ ಗೂಢಾಚಾರರನ್ನು ಕಳುಹಿಸಿದ್ರು. ಆದ್ರೆ ಅವರು ವಾಪಸ್ ಬಂದಾಗ ಪ್ರವಾದಿಗೆ ಸುಳ್ಳು ಹೇಳಿದ್ರು. ಅದಕ್ಕಾಗಿ ಅವರಿಗೆ ದೇವರು ನೀಡಿದ ಪ್ಲೇಗ್ ಶಿಕ್ಷೆಗೆ ಬಲಿಯಾದ್ರು ಅಂತ ಬರೆದುಕೊಂಡಿದ್ದಾರೆ. ಇನ್ನು ನೆತಾನ್ಯಹು ಕೆಳಗಿಳಿಸಲು ರಾಷ್ಟ್ರೀಯವಾದಿ ನಾಯಕ ನೆಫ್ತಾಲಿ ಬೆನ್ನೆಟ್ ಮತ್ತವರ ಯಾಮಿನಾ ಪಕ್ಷ ಜಾತ್ಯಾತೀತ ಮತ್ತು ಎಡಪಂಥೀಯರ ಜೊತೆ ಕೈಜೋಡಿಸಿರೋದು ತುಂಬಾ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಜಮಿನ್ ನೆತಾನ್ಯಹು ಬೆಂಬಲಿಗರು ಈಗಾಗಲೇ ನೆಫ್ತಾಲಿ ಬೆನ್ನೆಟ್ ಮತ್ತವರ ಬೆಂಬಲಿಗರನ್ನು ಸೋಷಿಯಲ್ ಮೀಡಿಯಾದಲ್ಲಿ ಗುರಿಯಾಗಿಸ್ತಿದ್ದಾರೆ. ಜೊತೆಗೆ ಯಾಮಿನಾ ಪಕ್ಷದ ಕಚೇರಿ ಮತ್ತು ನಾಯಕರ ಮನೆಗಳ ಮುಂದೆ ಸೇರ್ತಿದ್ದು, ಜೀವ ಬೆದರಿಕೆಯ ಸಂದೇಶಗಳನ್ನು ಕೂಡಾ ಕಳುಹಿಸ್ತಿದ್ದಾರೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply