ಚಂದ್ರಯಾನ-3 ಬಳಿಕೆ ʻಗಗನಯಾನʼದ ಕಡೆ ದೃಷ್ಟಿನೆಟ್ಟ ಇಸ್ರೋ!

masthmagaa.com:

ಚಂದ್ರಯಾನ-3ರ ಯಶಸ್ವಿ ಉಡಾವಣೆ ಬಳಿಕ ದೇಶದ ಮೊದಲ ಮಾನವಸಹಿತ ಸ್ಪೇಸ್‌ ಮಿಷನ್‌ ʻಗಗನಯಾನʼದ ಮೇಲೆ ಇಸ್ರೋ ಗಮನಹರಿಸುತ್ತಿದೆ. ಈ ಮಿಷನ್‌ನ ಭಾಗವಾಗಿ ಅಗಸ್ಟ್‌ ತಿಂಗಳಲ್ಲಿ ಮೊದಲ ಟೆಸ್ಟ್‌ ಲಾಂಚ್‌ ಮಾಡಲಾಗುತ್ತೆ ಅಂತ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಹೇಳಿದ್ದಾರೆ. ಅಂದ್ಹಾಗೆ ಗಗನಯಾನ ಮಿಷನ್‌ ಅಡಿಯಲ್ಲಿ 3 ಜನ ಗಗನಯಾತ್ರಿಗಳನ್ನು ಹೊತ್ತ ನೌಕೆಯನ್ನು ಭೂಮಿಯಿಂದ 400 ಕಿಲೋಮೀಟರ್‌ ಅಂತರದ ಕೆಳ ಕಕ್ಷೆಗೆ ಕಳಿಸಲಾಗುವುದು. ಈ ನೌಕೆ 3 ರಿಂದ 4 ದಿನಗಳ ಕಾಲ ಕಕ್ಷೆಯಲ್ಲಿ ಸುತ್ತಿ ವಾಪಾಸ್‌ ಮರಳಲಿದೆ. ಅಂದ್ಹಾಗೆ 2024ರಲ್ಲಿ ಗಗನಯಾನ ನೌಕೆಯನ್ನು ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತೆ ಅಂತ ಇಸ್ರೋ ಹೇಳಿದೆ.

-masthmagaa.com

Contact Us for Advertisement

Leave a Reply