ಕರಗುತ್ತಿದೆ ಅಂಟಾರ್ಕ್ಟಿಕಾದ ಹಿಮಗಡ್ಡೆ! ಮನುಕುಲಕ್ಕೆ ಕಾದಿದ್ಯಾ ಗಂಡಾಂತರ?

masthmagaa.com:

ಅಂಟಾರ್ಕ್ಟಿಕದಲ್ಲಿನ ಐಸ್‌ಬರ್ಗ್‌ ತೀವ್ರವಾಗಿ ಕರಗಿ ಹೋಗ್ತಿದೆ ಅನ್ನೊ ಆತಂಕಕಾರಿ ವಿಷಯ ತಿಳಿದು ಬಂದಿದೆ. ಇಟಲಿಯ ಸಂಶೋಧಕರ ಹಡಗೊಂದು ತಲುಪೋಕೆ ಸಾಧ್ಯವಾಗ್ದೆ ಇದ್ದ ಸ್ಥಳಕ್ಕೆ ತಲುಪಿದ್ದಾರೆ. ಅಂದ್ರೆ ಐಸ್‌ನಿಂದ ಈ ಮೊದಲು ಅಂಟಾರ್ಕ್ಟಿಕಾದ ದಕ್ಷಣ ಭಾಗದತ್ತ ಜಾಸ್ತಿ ದೂರ ಹೋಗೋಕೆ ಆಗ್ತಾ ಇರಲಿಲ್ಲ. ಆದ್ರೆ ಇದೀಗ ಹಿಮ ಕರಗುತ್ತಿರೋದ್ರಿಂದ ಈ ಮೊದಲಗಿಂತ ಹೆಚ್ಚು ದೂರ ಬಂದಿದ್ದೇವೆ. ಈ ಸಾಧನೆ ಮಾಡಿರೋದಕ್ಕೆ ನನಗೆ ಸಂತೋಷವಾಗಿದೆ. ಆದ್ರೆ ಇದೇ ಸಮಯದಲ್ಲಿ ಅಂಟಾರ್ಕ್ಟಿಕದಲ್ಲಿ ಆಗಿರೋ ಬದಲಾವಣೆಯನ್ನ ನೋಡಿದ್ರೆ ದುಃಖ ಆಗುತ್ತೆ ಅಂತ ಪ್ರಯಾಣ ಕೈಗೊಂಡಿದ್ದ ಶಿಪ್‌ನ ಕ್ಯಾಪ್ಟನ್‌ ಫ್ರಾನ್ಕೊ ಸೆಡ್ಮಾರ್ಕ್‌ ಹೇಳಿದ್ದಾರೆ. ಇನ್ನು 2017ರಲ್ಲಿ ಅದೇ ಪ್ರದೇಶಕ್ಕೆ ಕೈಗೊಂಡಿದ್ದ ಪ್ರಯಾಣಕ್ಕೆ ಮಂಜುಗಡ್ಡೆ ಅಡ್ಡ ಬಂದಿತ್ತು. ಕೆಲವು ವರ್ಷಗಳ ನಂತ್ರ ನಾವು ಆ ಪ್ರದೇಶಕ್ಕೆ ಇಷ್ಟು ಸುಲಭವಾಗಿ ಹೋಗ್ತೇವೆ. ಹಾಗೂ ಮಂಜುಗಡ್ಡೆ ಕರಗಿರುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ ಅಂತ ಸೆಡ್ಮಾರ್ಕ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply