ಬೈಡೆನ್‌ ವಿರುದ್ಧ ಕಿಡಿಕಾರಿದ ಇಸ್ರೇಲ್‌ ಸಚಿವ: ʻಟ್ರಂಪ್‌ ಇರ್ಬೇಕಿತ್ತುʼ!

masthmagaa.com:

ಇಸ್ರೇಲ್‌ ಯುದ್ಧದ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪರಿಸ್ಥಿತಿ ಒಂತರ ಆರಕ್ಕೇಳಲ್ಲ, ಮೂರಕ್ಕಿಳಿಯಲ್ಲಾ ಅನ್ನೋ ತರ ಆಗಿದೆ. ಅತ್ತ ಯುದ್ಧದಲ್ಲಿ ನಾಗರೀಕರಿಗೆ ಹಾನಿ ಆಗ್ಬಾರ್ದು ಅಂತ ಯೋಚ್ನೆ ಮಾಡ್ಬೇಕು. ಇತ್ತ ಇಸ್ರೇಲ್‌ ಕೈನೂ ಬಿಡಂಗಿಲ್ಲ. ಇಂತ ಪರಿಸ್ಥಿತಿಲಿರೋ ಬೈಡೆನ್‌ಗೆ ಮುಖಭಂಗ ಆಗೋ ಒನ್ನೊಂದು ಸುದ್ದಿ ಇಸ್ರೇಲ್‌ ಕಡೆಯಿಂದ ಬಂದಿದೆ. ಇಸ್ರೇಲ್‌ನ ಮಿನಿಸ್ಟರ್‌ ಒಬ್ರು, ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹಮಾಸ್‌ ಯುದ್ಧಕ್ಕೆ ಇನ್ನೂ ಜಾಸ್ತಿ ಸಪೋರ್ಟ್‌ ಕೊಟ್ಟಿರೋರು. ಗಾಜಾ ಮೇಲೆ ದಾಳಿ ನಡೆಸೋಕೆ ನಮಗೆ ಇನ್ನೂ ಈಸಿ ಆಗಿರೋದು. ನಮಗೆ ಪೂರ್ತಿ ಸಪೋರ್ಟ್‌ ಕೊಡೋದ್‌ ಬಿಟ್ಟು, ಬೈಡೆನ್‌ ಹಮಾಸ್‌ಗಳಿಗೆ ನೆರವಾಗೋ ತರ ಮಾನವೀಯ ನೆರವು ಕೊಡೋ ಕೆಲಸ ಮಾಡ್ತಿದ್ದಾರೆʼ ಅಂತ ಸಚಿವ ಬೆನ್‌-ಗ್ವಿರ್‌ ಹೇಳಿದ್ದಾರೆ. ಇವ್ರ ಹೇಳಿಕೆಗೆ ಇಸ್ರೇಲ್‌ನಲ್ಲೂ ವಿರೋಧಗಳು ಕೇಳಿ ಬಂದಿವೆ.

-masthmagaa.com

Contact Us for Advertisement

Leave a Reply