ಯುದ್ಧಕ್ಕೆ ಸಿದ್ಧವಾಗೋ ಸಮಯ ಬಂತು: ಕಿಮ್‌ ಜಾಂಗ್‌ ಉನ್‌

masthmagaa.com:

ʻನಮ್ಮ ದೇಶದ ಸುತ್ತಾ ಕೆಟ್ಟ ಪರಿಸ್ಥಿತಿ ಇದೆ. ಇದರ ಅರ್ಥ ಇಷ್ಟೇ, ಹಿಂದೆಂದಿಗಿಂತಲೂ ಈಗ ಹೆಚ್ಚು ಯುದ್ಧಕ್ಕೆ ರೆಡಿಯಾಗೋ ಟೈಮ್‌ ಬಂದಿದೆʼ ಅಂತ ಕಿಮ್‌ ಜಾಂಗ್‌ ಉನ್‌, ಉತ್ತರ ಕೊರಿಯಾದ ಸರ್ವಾಧಿಕಾರಿ ಹೇಳಿಕೆ ಕೊಟ್ಟಿದ್ದಾರೆ. ಅಲ್ದೆ ಈ ಸಲ ಯುದ್ಧಕ್ಕೆ ಮುಂದಾಗೋ ಎಲ್ಲಾ ಶತ್ರುಗಳನ್ನ ಮತ್ತೆ ನೋಡೋದ ರೀತಿ ನಾಶ ಮಾಡ್ಬಿಡ್ತೀವಿ ಅಂತ ಅಬ್ಬರಿಸಿದ್ದಾರೆ. ನಾರ್ತ್‌ ಕೊರಿಯಾದ ಪ್ರಮುಖ ಕಿಮ್‌ ಜಾಂಗ್‌-2 ಅನ್ನೋ ಮಿಲಿಟರಿ ಯುನಿವರ್ಸಿಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸ್ತಿರೋವಾಗ ಕಿಮ್‌ ಜಾಂಗ್‌ ಈ ರೀತಿ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೇ ಅಮೆರಿಕ ಜಪಾನ್‌ ಹಾಗೂ ಸೌತ್‌ ಕೊರಿಯಾಗಳು ಉತ್ತರ ಕೊರಿಯಾವನ್ನ ಗುರಿಯಾಗಿಸಿಕೊಂಡು ಸೇನಾಭ್ಯಾಸ ಮಾಡಿದ್ವು. ಮೊನ್ನೆ ದಕ್ಷಿಣ ಕೊರಿಯಾ ಆಂಟಿ ಸ್ಯಾಟಲೈಟ್‌ ಮಿಸೈಲ್‌ ಸೇರಿ ಅನೇಕ ಆಯುಧಗಳನ್ನ ಪರೀಕ್ಷೆ ಮಾಡಿತ್ತು. ಜಪಾನ್‌ ಕೂಡ ಆಕುಸ್‌ ಗುಂಪಿಗೆ ಸೇರೋಕೆ ರೆಡಿಯಾಗ್ತಿದೆ. ಹೀಗಾಗಿ ಆ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನವಾಗ್ತಿದ್ದು ಈ ಹೊತ್ತಲ್ಲೇ ಕಿಮ್‌ ಈ ಬೆದರಿಕೆ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply