ಉಗ್ರರ ಮಟ್ಟಾ ಹಾಕೋವಾಗ ಯಾವ್ದೇ ರೂಲ್ಸ್‌ ಪಾಲಿಸಲ್ಲ: ಜೈಶಂಕರ್‌

masthmagaa.com:

ಇತ್ತೀಚೆಗಷ್ಟೇ ಭಯೋತ್ಪಾದನೆ ಮಟ್ಟಹಾಕೋ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವ್ರು ಮಹತ್ವದ ಹೇಳಿಕೆ ಕೊಟ್ಟಿದ್ರು. ಉಗ್ರರು ಇರೋ ಜಾಗಕ್ಕೆ ನುಗ್ಗಿ ಹೊಡಿತೀವಿ, ಅವರ ಜಾಗದಲ್ಲೇ ಅವರನ್ನ ಮುಗಿಸ್ತೀವಿ ಅಂತ ಹೇಳಿದ್ರು. ಇದೀಗ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಕೂಡ ಅದೇ ರೀತಿಯ ಹೇಳಿಕೆ ಕೊಟ್ಟಿದ್ದು ದೊಡ್ಡ ಸಂಚಲನ ಹುಟ್ಟಾಕಿದೆ.. ಅದು ಏನ್‌ ಹೇಳಿದ್ದಾರೆ ಅಂದ್ರೆ ʻಉಗ್ರರು ಯಾವ್ದೇ ರೀತಿ ರೂಲ್ಸ್‌ ಫಾಲೋ ಮಾಡದೇ…ದಾಳಿ ನಡೆಸ್ತಾರೆ. ಸೋ…ಅವ್ರ ದಾಳಿಗೆ ಪ್ರತಿಕ್ರಿಯೆಸುವ ನಾವ್‌ ಕೂಡ ಯಾವ್ದೇ ರೂಲ್ಸ್‌ ಫಾಲೋ ಮಾಡಲ್ಲ ಅಂತೇಳಿದ್ದಾರೆ. ಈ ಮೂಲಕ ಬಹಿರಂಗವಾಗಿಯೇ ಉಗ್ರರ ವಿಚಾರದಲ್ಲಿ ಯಾವುದೇ ರೂಲ್ಸ್‌ ಕಾನೂನು ಕಾಯ್ದೆಗಳು ಅಡ್ಡ ಬರಲ್ಲ ನುಗ್ಗಿ ಹೊಡಿಬೋದು ಅನ್ನೋ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಕೆನಡಾ ಅಮೆರಿಕ ಪಾಕಿಸ್ತಾನಗಳು ಭಾರತದ ವಿರುದ್ದ ರೂಲ್‌ ಆಫ್‌ ಲಾ ಬಗ್ಗೆ ಮಾತಾಡ್ತಿರೋ ಹೊತ್ತಲ್ಲೇ ಜೈಶಂಕರ್‌ ಅವರ ಮಾತುಗಳು ಈಗ ಮಹತ್ವ ಪಡ್ಕೋತಿವೆ. ಯಾಕಂದ್ರೆ ಭಾರತದ ಮೇಲೆ ಈ ರೀತಿ ಆರೋಪ ಕೇಳಿ ಬಂದಾಗೆಲ್ಲಾ ವಿದೇಶಾಂಗ ಇಲಾಖೆ ಅತ್ಯಂತ ಗಂಭೀರವಾಗಿ ಇದರ ಬಗ್ಗೆ ರಿಯಾಕ್ಟ್‌ ಮಾಡ್ತಿತ್ತು. ನಾವು ಎಲ್ಲರ ಸಾರ್ವಭೌಮತ್ವವನ್ನ ಗೌರವಿಸ್ತೀವಿ, ನಾವು ಯಾರ ಹಕ್ಕನ್ನೂ ಉಲ್ಲಂಘನೆ ಮಾಡಲ್ಲ ಅಂತ ಹೇಳಿದ್ರು. ಆದ್ರೆ ಮೊನ್ನೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ ಮತ್ತು ಖುದ್ದು ಪ್ರಧಾನಿ ಮೋದಿ ನುಗ್ಗಿ ಹೊಡೀಬೋದು ಅದಕ್ಕೆ ಗಡಿಗಳ ಹಂಗು ಇಲ್ಲ ಅಂತ ಹೇಳಿಕೆ ಕೊಟ್ಟಿದ್ರು. ಈಗ ಜೈಶಂಕರ್‌ ಕೂಡ ಅದನ್ನೇ ಹೇಳಿದ್ದಾರೆ. 2008ರ ಮುಂಬೈ ದಾಳಿ ಕುರಿತು ಮಾತನಾಡುವಾಗ ʻʻ2014ರ ನಂತ್ರ ಅಂದ್ರೆ ಮೋದಿ ಪ್ರಧಾನಿಯಾದ ಬಳಿಕ ಭಾರತದ ಫಾರೀನ್‌ ಪಾಲಿಸಿಯಲ್ಲಿ ಸಾಕಷ್ಟು ಬದಲಾವಣೆಗಳಾದ್ವು. ಇದ್ರಿಂದ ಭಯೋತ್ಪಾದನೆ ಕಂಟ್ರೋಲ್‌ ಮಾಡೋಕೆ ಸಾಧ್ಯವಾಯ್ತು. ಪಾಕಿಸ್ತಾನ ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದೆ ಅನ್ನೋ ಬಗ್ಗೆ ಭಾರತ ಹಿಂದಿನಿಂದಲೂ ಕ್ಲಿಯರ್‌ ಆಗಿತ್ತು. ಈ ಬಗ್ಗೆ ಭಾರತ ಯಾವೊಂದು ಸಂದರ್ಭದಲ್ಲೂ ಸಹಿಸಬಾರದುʼ ಅಂತೇಳಿದ್ದಾರೆ. ಅಷ್ಟೇ ಅಲ್ದೇ ಮುಂಬೈ ದಾಳಿಯ ರೀತಿ ಮತ್ತೊಮ್ಮೆ ಆದ್ರೆ, ಅದಕ್ಕೆ ರಿಯಾಕ್ಟ್‌ ಮಾಡಿಲ್ಲ ಅಂದ್ರೆ….ಪುನಃ ಅಂತದ್ದೇ ದಾಳಿ ಆಗೋದನ್ನ ಹೇಗೆ ತಡೀತೀರಿ. ಉಗ್ರರನ್ನ ತಡೆಯೋರು ಯಾರು ಇಲ್ಲ ಅನ್ನೋ ಭಾವನೆ ಮೂಡೋಕೆ ಬಿಡಬಾರದು. ಸೋ ಉಗ್ರರಿಗೆ ಅವ್ರ ಸ್ಟೈಲ್‌ನಲ್ಲೇ ಉತ್ತರ ನೀಡ್ಬೇಕುʼ ಅಂತ ಜೈಶಂಕರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply