ಜೈ ಶಂಕರ್‌ಗೆ ದೀಪಾವಳಿ ವಿಶೇಷ ಆತಿಥ್ಯ ನೀಡಿದ ರಿಷಿ ಸುನಕ್, ಸುನಕ್‌ಗೆ ಕೊಹ್ಲಿ ಬ್ಯಾಟ್‌ ಕೊಟ್ಟ ಜೈ ಶಂಕರ್‌ !

masthmagaa.com:

ಐದು ದಿನಗಳ ಬ್ರಿಟನ್‌ ಪ್ರವಾಸ ಕೈಗೊಂಡಿರುವ ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್‌ಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ದೀಪಾವಳಿ ವಿಶೇಷ, ಚಹಾಕ್ಕೆ ಆಮಂತ್ರಿಸಿ ಭರ್ಜರಿ ಆತಿಥ್ಯದ ಮೂಲಕ ಸ್ವಾಗತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೈ ಶಂಕರ್‌ರವರು ʻʻದೀಪಾವಳಿ ದಿನ ನನ್ನನ್ನು ಆಮಂತ್ರಿಸಿದ್ದಕ್ಕೆ ತುಂಬಾ ಖುಷಿ ತಂದಿದೆ. ನನಗೆ ಸಾಂಪ್ರದಾಯಿಕ ಆತಿಥ್ಯ ನೀಡಿದ್ದಕ್ಕಾಗಿ ರಿಷಿ ಸುನಕ್‌ ದಂಪತಿಗಳಿಗೆ ಧನ್ಯವಾದ” ಅಂತ ಹೇಳಿ ಗಣೇಶನ ವಿಗ್ರಹ ಹಾಗೂ ರನ್‌ ಮಷೀನ್‌ ವಿರಾಟ್‌ ಕೊಹ್ಲಿ ಸಹಿ ಹಾಕಿದ ಬ್ಯಾಟ್‌ ನೀಡಿದ್ದಾರೆ. ಇದೇ ವೇಳೆ, ಭಾರತ ಮತ್ತು ಯು.ಕೆ ಹಲವು ವಿಚಾರಗಳಲ್ಲಿ ಸಹಕಾರ ಹೊಂದೋಕೆ ಮುಂದಾಗಿವೆ. ಮುಂಬರುವ ತಿಂಗಳಲ್ಲಿ ಯು.ಕೆ ಪ್ರಧಾನಿ ರಿಷಿ ಸುನಕ್‌ ಭಾರತ ಪ್ರವಾಸ ಕೈಗೊಳ್ಳುವ ಕುರಿತು ಮಾತುಕತೆ ನಡೆಸಲಾಗಿದೆ.

-masthmagaa.com

Contact Us for Advertisement

Leave a Reply