ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಕೆಸಲ ಶುರು.. ಶ್ರೀಘ್ರ ಬರಲಿದೆ ಬಾಹ್ಯಾಕಾಶದ ಅದ್ಭುತ ದೃಶ್ಯ!

masthmagaa.com:

ಭೂಮಿಯ ಕಣ್ಣಾಗಿರುವ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಬಾಹ್ಯಾಕಾಶದಲ್ಲಿ ತನ್ನ ಕೆಲಸವನ್ನ ಪ್ರಾರಂಭಿಸಿದೆ. ಇದೀಗ ಜೇಮ್ಸ್‌ ವೆಬ್‌ ಮೊದಲ ಬಾರಿಗೆ ತೆಗೆದ ಸಂಪೂರ್ಣ ಕಲರ್‌ ಫೋಟೋವನ್ನ ಹಾಗೆ ಸ್ಪೆಕ್ಟ್ರೋಸ್ಕೋಪಿಕ್ ಡೇಟಾವನ್ನ ಇದೇ ಜುಲೈ 12 ರಂದು ಬಿಡುಗಡೆ ಮಾಡಲಿದೆ ಅಂತ ನಾಸಾ ಹೇಳಿದೆ. ಈ ಟೆಲಿಸ್ಕೋಪನ್ನ ನಾಸಾ, ಯುರೋಪಿಯನ್‌ ಸ್ಪೇಸ್‌ ಏಜನ್ಸಿ ಮತ್ತು ಕೆನಡಿಯನ್‌ ಸ್ಪೇಸ್‌ ಏಜನ್ಸಿ ಒಟ್ಟಾಗಿ ತಯಾರಿಸಿದ್ದು ಕಳೆದ ಡಿಸೆಂಬರ್‌ನಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಇದೀಗ ಆರು ತಿಂಗಳಾದ ನಂತ್ರ ಟೆಲಿಸ್ಕೋಪ್‌ ತನ್ನ ಕೆಲಸ ಕಾರ್ಯಗಳನ್ನ ಪ್ರಾರಂಭಿಸಿದೆ. ಇನ್ನು ಜೇಮ್ಸ್‌ ವೆಬ್‌ ಈ ಹಿಂದೆ ಭೂಮಿಯ ಕಣ್ಣಾಗಿದ್ದ ಒಂದು ಸ್ಕೂಲ್‌ ಬಸ್‌ ಗಾತ್ರದ ಹಬಲ್‌ ವೆಬ್‌ ಟೆಲಿಸ್ಕೋಪ್‌ ಅನ್ನ ರಿಪ್ಲೇಸ್‌ ಮಾಡಲಿದೆ.

-masthmagaa.com

Contact Us for Advertisement

Leave a Reply