ಅಮೆರಿಕ-ಚೀನಾ ಕಂಪನಿಗಳ ನಡುವೆ ಸಮಾನ ಅವಕಾಶ ಕಲ್ಪಿಸಲು ಕರೆ!

masthmagaa.com:

ಚೀನಾದ ಇಂಡಸ್ಟ್ರಿಯಲ್‌ ಸಬ್ಸಿಡಿಗಳಿಂದ ಹದಗೆಟ್ಟಿರೊ ಚೀನಾ-ಅಮೆರಿಕ ಆರ್ಥಿಕ ಸಂಬಂಧವನ್ನ ಸರಿಪಡಿಸಲು ಈಗ ಅಮೆರಿಕ ಮುಂದಾಗಿದೆ. ಬೈಡೆನ್‌ ಸರ್ಕಾರ ತನ್ನ ಖಜಾನೆ ಮುಖ್ಯಸ್ಥೆ ಜಾನೆಟ್‌ ಯೆಲೆನ್‌ ಅವ್ರನ್ನ ಚೀನಾಗೆ ಕಳಿಸಿದೆ. ಈ ವರ್ಷದಲ್ಲಿ ಸದ್ಯ ಎರಡನೇ ಬಾರಿಗೆ ಚೀನಾ ಪ್ರವಾಸದಲ್ಲಿರೊ ಅವ್ರು, ಅಮೆರಿಕ-ಚೀನಾ ಕಂಪನಿಗಳ ನಡುವೆ ʻಲೆವಲ್‌ ಫ್ಲೇಯಿಂಗ್‌ ಫೀಲ್ಡ್‌ʼ‌ ಅಂದ್ರೆ ಸಮಾನ ಅವಕಾಶಕ್ಕೆ ಕರೆ ನೀಡಿದ್ದಾರೆ. ಅಮೆರಿಕದ ಕೆಲಸಗಾರರು ಹಾಗೂ ಕಂಪನಿಗಳಿಗೆ ಜಾಗತಿಕವಾಗಿ ಸಮಾನ ಅವಕಾಶ ಸಿಗ್ಬೇಕು. ಚೀನಾದ ಅತಿಯಾದ ಉತ್ಪಾದನಾ ಸಾಮರ್ಥ್ಯದಿಂದ ಜಾಗತಿಕವಾಗಿ ತೊಂದರೆ ಆಗ್ಬೋದು. ಗ್ರೀನ್‌ ಎನರ್ಜಿ, ಇವಿ ಹಾಗೈ ಬ್ಯಾಟರಿ ತಯಾರಿಕೆ ಮೇಲೆ ಚೀನಾ ಕೊಡೋ ಸಬ್ಸಿಡಿಯಿಂದ ಗ್ಲೋಬಲ್‌ ಮಾರ್ಕೆಟ್‌ನಲ್ಲಿ ಅತಿ ಹೆಚ್ಚಿನ ಸರಕುಗಳ ಪ್ರವಾಹ ಆಗುತ್ತೆ. ಇದ್ರಿಂದ ಅಮೆರಿಕ ಸೇರಿ ಇತರ ದೇಶಗಳ ಮಾರ್ಕೆಟ್‌ಗೆ ಹೊಡೆತ ಬೀಳುತ್ತೆ ಅಂತ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಚೀನಾದ ಅಧಿಕಾರಿಗಳನ್ನ ಮೀಟ್‌ ಮಾಡಿ ಮಾತುಕತೆ ನಡೆಸಿರೋ ಯೆಲೆನ್‌, ಚೀನಾ ಜೊತೆ ಒಳ್ಳೆಯ ಆರ್ಥಿಕ ಸಂಬಂಧ ಹೊಂದೋಕೆ ಅಮೆರಿಕ ಬದ್ದವಾಗಿದೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply