ತ್ರಿವಳಿ ರಕ್ಷಣಾ ಕೂಟ AUKUSಗೆ ಎಂಟ್ರಿ ಕೊಡಲಿದೆಯಂತೆ ಜಪಾನ್!

masthmagaa.com:

ಇಂಡೋ ಫೆಸಿಫಿಕ್‌ ಪ್ರದೇಶದ ತ್ರಿವಳಿ ರಕ್ಷಣಾ ಕೂಟ AUKUSಗೆ ಈಗ ಮತ್ತೊಂದು ದೇಶ ಎಂಟ್ರಿಯಾಗ್ತಿದೆ. ಆಸ್ಟ್ರೇಲಿಯಾ, ಬ್ರಿಟನ್‌, ಅಮೆರಿಕ ಡಿಫೆನ್ಸ್‌ ಒಕ್ಕೂಟಕ್ಕೆ ಇದೀಗ ಜಪಾನ್‌ ಸೇರ್ಕೋತಿದೆ. ಈ ವಿಚಾರವಾಗಿ ಮೂರು ರಾಷ್ಟ್ರಗಳು ಮಾತುಕತೆ ನಡೆಸ್ತಿವೆ ಅಂತ ಫಿನಾನ್ಷಿಯಲ್‌ ಟೈಮ್ಸ್‌ ವರದಿ ಮಾಡಿದೆ. ಇಂಡೋ ಫೆಸಿಫಿಕ್‌ ರಿಜನ್‌ನಲ್ಲಿ ಅಗ್ರೆಸ್ಸಿವ್‌ ಆಗಿ ನಡೆದುಕೊಳ್ತಿರೋ ಚೀನಾನ ಹತ್ತಿಕ್ಕೋಕೆ ಈ ಸ್ಟ್ರಟಜಿ ಹೂಡಲಾಗಿದೆ. ಏಪ್ರಿಲ್‌ 8 ಅಂದ್ರೆ ನಾಳೆ ಸೋಮವಾರ ನಾಲ್ಕು ದೇಶಗಳು ಜಂಟಿಯಾಗಿ ಈ ಘೋಷಣೆ ಮಾಡಲಿವೆ. ಅದ್ರಲ್ಲೂ AUKUS ಒಪ್ಪಂದದ ಪಿಲ್ಲಾ 2 ಭಾಗದಲ್ಲಿ ಮಾತ್ರ ಜಪಾನ್‌ನ ಸೇರಿಸಿಕೊಳ್ತಿವೆ ಎನ್ನಲಾಗಿದೆ. ಈ ಪಿಲ್ಲರ್‌ 2 ನಲ್ಲಿ ಕ್ವಾಂಟಂ ಕಂಪ್ಯೂಟಿಂಗ್‌, ಅಂಡರ್‌ ಸೀ ಚಟುವಟಿಕೆ, ಹೈಪರ್‌ಸಾನಿಕ್‌, ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌, ಸೈಬರ್‌ ಟೆಕ್ನಾಲಜಿ ಈ ರೀತಿ ವಿಚಾರಗಳು ಇವೆ. ಇನ್ನು ಪಿಲ್ಲರ್‌ 1ರಲ್ಲಿ ಅಗತ್ಯಬಿದ್ದಾಗ ಆಸ್ಟ್ರೇಲಿಯಾಗೆ ನ್ಯೂಕ್ಲಿಯರ್‌ ಚಾಲಿತ ಸಬ್‌ಮರಿನ್‌ ನೀಡೋ ವಿಚಾರ ಇದೆ. ಆದ್ರೆ ಈ ವಿಷಯದಲ್ಲಿ ಜಪಾನ್‌ನ ಸೇರಿಸಿಕೊಳ್ತಿಲ್ಲ.

-masthmagaa.com

Contact Us for Advertisement

Leave a Reply