ಸದ್ಯದಲ್ಲೇ ತೆರೆಗೆ ಬರಲಿದೆ “ಜಯಕೃಷ್ಣ” ATTACK 1 ಚಿತ್ರ!!

masthmagaa.com:

ಲೂಸ್ ಮಾದ ಯೋಗಿ ಅಭಿನಯದ “ನಂದ ಲವ್ಸ್ ನಂದಿತ” ಚಿತ್ರದ ಯಶಸ್ವಿ ಹಾಡು ಜಿಂಕೆ ಮರಿನಾ.. ಈ ಸೂಪರ್ ಹಿಟ್ ಸಾಂಗ್ ಬರೆದಿದ್ದು, ರಾಜ್ ಆನಂದರಾಂ .ಈಗ ಇವರು ನಿರ್ದೇಶಿಸಿರುವ ಆಕ್ಷನ್ – ಥ್ರಿಲ್ಲರ್ ಆಧಾರಿತ “ಜಯಕೃಷ್ಣ” ATTACK 1 ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ.‌ ಸದ್ಯದಲ್ಲೇ ತೆರೆಗೆ ಬರಲಿದೆ.

ಮುರಳಿ ಮೋಹನ್, ಎಚ್.ವಾಸು ಮುಂತಾದ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿ ಅನುಭವವಿರುವ ರಾಜ್ ಆನಂದರಾಂ ಈ ಹಿಂದೆ ಮೇಸ್ತ್ರಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ನಿರ್ಮಾಣ ಹಾಗೂ ನಿರ್ದೇಶನ ರಾಜ್ ಆನಂದರಾಂ ಅವರದೆ. ಬೆಂಗಳೂರು, ನೆಲಮಂಗಲ, ದೊಡ್ಡಬಳ್ಳಾಪುರ ಸುತ್ತಮುತ್ತ ಮೂವತ್ತೆರಡು ದಿನಗಳ ಚಿತ್ರೀಕರಣ ನಡೆದಿದೆ. ಓಂ ಫಿಲಂಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಶ್ರೀಮತಿ ಲಕ್ಷ್ಮೀರಮೇಶ್ ಅರ್ಪಿಸುವ ಈ‌ ಚಿತ್ರದ ಸಹ ನಿರ್ಮಾಪಕರು ಆರ್ ಲೋಕೇಶ್, ವೇಣುಗೋಪಾಲ್, ಸುರೇಶ್ ಪೂಜಾರಿ ಹಾಗೂ ದಿನಕರ್ ಪೂಜಾರಿ.ಖ್ಯಾತ ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಕುಮಾರ್ ಚಕ್ರವರ್ತಿ ಹಾಗೂ ರಾಘವೇಂದ್ರ ಬಿ ಕೋಲಾರ್ ಈ ಚಿತ್ರದ ಛಾಯಾಗ್ರಹಕರು. ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಬಂಡೆ‌ ಚಂದ್ರು, ಅಶೋಕ್, ಕೌರವ ವೆಂಕಟೇಶ್, ರಾಂದೇವ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ನಿರ್ದೇಶಕ ರಾಜ್ ಆನಂದರಾಂ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ರಶ್ಮಿತಾ ಶೆಟ್ಟಿ, ಜೋಗಿ ನಾಗರಾಜ್, ಕೆ.ವಿ.ಮಂಜಯ್ಯ, ಪ್ರಣತಿ, ಖುಷಿ, ದೀಪು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

masthmagaa.com

Contact Us for Advertisement

Leave a Reply