2022ರಲ್ಲಿ ಅಂಬಾನಿ-ಅದಾನಿಗಿಂತಲೂ ಹೆಚ್ಚು ಹಣ ಕಳೆದುಕೊಂಡ ಜೆಫ್‌ ಬೆಜೊಸ್!

masthmagaa.com:

ಕಳೆದ ವರ್ಷದಲ್ಲಿ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೊಸ್‌ ಅತಿಹೆಚ್ಚು ಮೌಲ್ಯದ ಆಸ್ತಿ ಕಳೆದುಕೊಂಡಿದ್ದಾರೆ ಅಂತ ಇತ್ತೀಚೆಗೆ ಬಿಡುಗಡೆಯಾದ ಹುರೂನ್‌ ಗ್ಲೋಬಲ್‌ ರಿಚ್‌ ಲಿಸ್ಟ್‌ನಲ್ಲಿ ಗೊತ್ತಾಗಿದೆ. 2022ರಲ್ಲಿ ಭಾರತದ ಬಿಲಿಯನೇರ್‌ಗಳಾದ ಗೌತಮ್‌ ಅದಾನಿ ಹಾಗೂ ಮುಕೇಶ್‌ ಅಂಬಾನಿ ಒಟ್ಟಾಗಿ ಕಳೆದುಕೊಂಡ ಆಸ್ತಿ ಮೌಲ್ಯಕ್ಕಿಂತ ಹೆಚ್ಚಿನ ಆಸ್ತಿಯನ್ನ ಬೆಜೋಸ್‌ ಕಳೆದುಕೊಂಡಿದ್ದಾರೆ. ಮುಕೇಶ್‌ ಅಂಬಾನಿ ತಮ್ಮ ವೈಯಕ್ತಿಕ ಆಸ್ತಿಯಲ್ಲಿ 21 ಬಿಲಿಯನ್‌ ಡಾಲರ್ ಕಳೆದುಕೊಂಡಿದ್ರೆ, ಗೌತಮ್‌ ಅದಾನಿ ತಮ್ಮ ವೈಯಕ್ತಿಕ ಆಸ್ತಿಯಲ್ಲಿ 28 ಬಿಲಿಯನ್‌ ಡಾಲರ್‌ ಕಳೆದುಕೊಂಡಿದ್ದಾರೆ. ಆದ್ರೆ ಜೆಫ್‌ ಬೆಜೋಸ್‌ ಅದೇ ಅವಧಿಯಲ್ಲಿ ವೈಯಕ್ತಿಕವಾಗಿ 70 ಬಿಲಿಯನ್‌ ಡಾಲರ್‌ ಆಸ್ತಿ ಕಳೆದುಕೊಂಡಿದ್ದಾರೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಇದಾರೆ. ಅವರು ತಮ್ಮ ವೈಯಕ್ತಿಕ ಸಂಪತ್ತಿನಲ್ಲಿ 48 ಬಿಲಿಯನ್‌ ಡಾಲರ್‌ ಹಣವನ್ನ ಕಳೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply