ಈ ವರ್ಷ ಭಾರಿ ಸಂಖ್ಯೆಯ ಅಮೆಜಾನ್‌ ಷೇರುಗಳ ಮಾರಾಟಕ್ಕೆ!

masthmagaa.com:

ಅಮೆಜಾನ್‌ ಸಿಇಒ ಜೆಫ್‌ ಬೆಸೋಸ್‌ ಭಾರಿ ಸಂಖ್ಯೆಯ ಷೇರುಗಳನ್ನ ಮಾರಾಟ ಮಾಡೋದಾಗಿ ಅನೌನ್ಸ್‌ ಮಾಡಿದ್ದಾರೆ. 2025ರ ಜನವರಿ 31ರೊಳಗೆ ಬರೋಬ್ಬರಿ 5 ಕೋಟಿ ಅಮೆಜಾನ್‌ ಷೇರುಗಳನ್ನು ಮಾರೋದಾಗಿ ಹೇಳಿದ್ದಾರೆ. ಈಗಿನ ವೆಚ್ಚದಲ್ಲಿ ಅಂದ್ರೆ ಪ್ರತಿ ಷೇರಿಗೆ $171.8ರ ಡಾಲರ್‌ ಲೆಕ್ಕದಲ್ಲಿ 5 ಕೋಟಿ ಷೇರುಗಳ ಮೌಲ್ಯ $8.6 ಬಿಲಿಯನ್‌ ಡಾಲರ್‌ ಅಗುತ್ತೆ. ಇನ್ನು ಈ ವಿಚಾರ ಸುದ್ದಿಯಾಗ್ತಿದ್ದಂತೆ ಶುಕ್ರವಾರ ಅಮೆಜಾನ್‌ ಷೇರುಗಳ ಮೌಲ್ಯ 8% ಜಾಸ್ತಿಯಾಗಿದೆ. ಇನ್ನು ಕಳೆದ ವರ್ಷ ಅಮೆಜಾನ್‌ ಷೇರುಗಳ ಮೌಲ್ಯ 80% ಜಾಸ್ತಿಯಾಗಿತ್ತು.

-masthmagaa.com

Contact Us for Advertisement

Leave a Reply