ಅಮೆರಿಕ ಅಧ್ಯಕ್ಷ ಬೈಡನ್‌ ಬಳಿ ಕಳವಳ ವ್ಯಕ್ತಪಡಿಸಿದ ಚೀನಾದ ಜಿನ್‌ಪಿಂಗ್‌!

masthmagaa.com:

ಅಮೆರಿಕ ಮತ್ತು ಚೀನಾ ತಮ್ಮ ದ್ವಿಪಕ್ಷೀಯ ಸಂಬಂಧ ಬಲಪಡಿಸಲು ಮುಂದಾಗಿವೆ. ಪೋನ್‌ ಕಾಲ್‌ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಇದೀಗ ಮಾತುಕತೆ ನಡೆಸಿದ್ದಾರೆ. ಈ ವೇಳೆ…ತೈವಾನ್‌ನ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡೋ ಅಗತ್ಯತೆಯನ್ನ ಬೈಡನ್‌ ಒತ್ತಿ ಹೇಳಿದ್ಧಾರೆ. ಜೊತೆಗೆ ದಕ್ಷಿಣ ಚೀನಾ ಭಾಗದಲ್ಲಿ ಮುಕ್ತವಾಗಿ ನೌಕಾಯಾನ ಮಾಡೋ ಬಗ್ಗೆನೂ ಹೈಲೈಟ್‌ ಮಾಡಿದ್ದಾರೆ. ಹೀಗಂತ ವೈಟ್‌ ಹೌಸ್‌ ಮಾಹಿತಿ ನೀಡಿದೆ. ಜೊತೆಗೆ ಚೀನಾದ ವ್ಯಾಪಾರ ಮತ್ತು ತಂತ್ರಜ್ಞಾನ ಪ್ರಗತಿಗೆ ಅಮೆರಿಕ ನಿರ್ಬಂಧ ಹೇರೋ ವಿಚಾರವಾಗಿ ಕ್ಸಿ ಕಳವಳ ವ್ಯಕ್ತಪಡಿಸಿದ್ದಾರೆ ಅಂತ ಚೀನಾದ ಸುದ್ದಿ ಮಾದ್ಯಮ ರಿಪೋರ್ಟ್‌ ಮಾಡಿದೆ.. ಉಭಯ ನಾಯಕರ ಮಾತುಕತೆ ವೇಳೆ ಅನೇಕ ಜಾಗತಿಕ ಸಮಸ್ಯೆಗಳ ಬಗ್ಗೆನೂ ಡಿಸ್‌ಕಸ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply