ಮುಂದಿನ ವಾರವೇ ಗಾಜಾದಲ್ಲಿ ಕದನ ವಿರಾಮ: ಜೋ ಬೈಡನ್!

masthmagaa.com:

ಗಾಜಾ ಯುದ್ದ ವಿಚಾರ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಮುಂದಿನ ವಾರ.. ಅದ್ರಲ್ಲೂ ಬರೋ ಸೋಮವಾರ..ಮಾರ್ಚ್‌ 4ರಂದು ಗಾಜಾದಲ್ಲಿ ಕದನ ವಿರಾಮ ಘೋಷಣೆಯಾಗೋ ಸಾಧ್ಯತೆ ಇದೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿಕೆ ನೀಡಿದ್ದಾರೆ. ಈ ಕದನ ವಿರಾಮದ ಭಾಗವಾಗಿ ನೂರಾರು ಪ್ಯಾಲಸ್ತೀನ್ ಒತ್ತೆಯಾಳುಗಳು ಇಸ್ರೇಲ್‌ನಿಂದ ರಿಲೀಸ್‌ ಆಗ್ತಾರೆ ಅಂತಾನೂ ಹೇಳಿದ್ದಾರೆ. ಇತ್ತೀಚೆಗೆ ಗಾಜಾ ಕದನ ವಿರಾಮ ಸಂಬಂಧ ಪ್ಯಾರಿಸ್‌ನಲ್ಲಿ ಮೀಟಿಂಗ್‌ ಮಾಡಿದ ಬಳಿಕ ಈಜಿಪ್ಟ್‌, ಅಮೆರಿಕ, ಹಾಗೂ ಕತಾರ್‌ ಗಳು ಕತಾರ್‌ ರಾಜಧಾನಿ ದೋಹಾದಲ್ಲಿ ಸಭೆ ಮಾಡಿದ್ವು. ಈ ಸಭೆಗೆ ಇಸ್ರೇಲ್‌, ಹಮಾಸ್‌ ಪ್ರತಿನಿಧಿಗಳು ಭಾಗಿಯಾಗಿದ್ರು. ಆ ಸಭೆ ನಡೆದ ಬೆನ್ನಲ್ಲೆ ಬೈಡನ್‌ ಈ ರೀತಿ ಹೇಳಿಕೆ ನೀಡಿದ್ದಾರೆ. ಆದ್ರೆ ಈ ಕಡೆ ಇಸ್ರೇಲ್‌ ಪ್ರಧಾನಿ ಮಾತ್ರ ಇದಕ್ಕೆ ತದ್ವಿರುದ್ದವಾದ ಹೇಳಿಕೆ ಕೊಟ್ಟಿದ್ದಾರೆ….ʻಗಾಜಾದಿಂದ ತಮ್ಮ ಸೈನ್ಯವನ್ನ ವಾಪಾಸ್ ಕರೆಸಿಕೊಳ್ತೀವಿ ಅನ್ನೋದು ಬರೀ ಭ್ರಮೆʼ ಅಂತೇಳಿ ಕದನ ವಿರಾಮ ವಿಚಾರವನ್ನ ತಳ್ಳಿ ಹಾಕಿದ್ದಾರೆ. ಇದೆಲ್ಲದ್ರ ಮಧ್ಯೆ “ಗಾಜಾದ ಖಾನ್‌ ಯುನೀಸ್‌ ನಗರದಲ್ಲಿ ನಡೆದ ದಾಳಿಯೊಂದರಲ್ಲಿ 15 ಜನ ಇಸ್ರೇಲಿ ಸೈನಿಕರ ಪ್ರಾಣಹೋಗಿದೆ. ದಕ್ಷಿಣ ಗಾಜಾದಲ್ಲೂ ಅನೇಕ ಇಸ್ರೇಲಿ ಸೈನಿಕರನ್ನ ಹತ್ಯೆ ಮಾಡಿದ್ದೇವೆ” ಅಂತ ಹಮಾಸ್‌ ಹೇಳ್ಕೊಂಡಿದೆ.

-masthmagaa.com

Contact Us for Advertisement

Leave a Reply