ಕಾರ್ಗಿಲ್‌ ವಿಜಯ ದಿವಸ: ಹುತಾತ್ಮ ಯೋಧರಿಗೆ ಗಣ್ಯರಿಂದ ಗೌರವ ನಮನ

masthmagaa.com:

ಭಾರತ ಹಾಗೂ ಪಾಕಿಸ್ತಾನದ ನಡುವೆ 1999ರಲ್ಲಿ ನಡೆದಿದ್ದ ಕಾರ್ಗಿಲ್‌ ಯುದ್ಧದಲ್ಲಿ ಭಾರತದ ಗೆಲುವಿಗಾಗಿ ತಮ್ಮ ಪ್ರಾಣ ಅರ್ಪಿಸಿದ್ದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿಯವರು ಗೌರವ ಸಲ್ಲಿಸಿದ್ದಾರೆ. ಈ ದಿನ ಭಾರತದ ಅಪ್ರತಿಮ ಯೋಧರ ಶೌರ್ಯ, ಸಾಹಸಗಾಥೆಯನ್ನ ಮುನ್ನೆಲೆಗೆ ತರುವಂತಾಗಿದ್ದು, ಅವರು ಯಾವಾಗಲೂ ದೇಶದ ಜನರಿಗೆ ಸ್ಫೂರ್ತಿಯಾಗಿ ಉಳಿಯಲಿದ್ದಾರೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಇತ್ತ ಲಡಾಖ್‌ನಲ್ಲಿರುವ ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವ್ರು ಭೇಟಿ ನೀಡಿದ್ದು, ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಮತ್ತೊಂದ್‌ ಕಡೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಸೇರಿದಂತೆ ಹಲವು ಗಣ್ಯರು ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅಂದ್ಹಾಗೆ ಪಾಕಿಸ್ತಾನವನ್ನ ಬಗ್ಗುಬಡಿದು ವಿಜಯ ಪತಾಕೆ ಹಾರಿಸಿದ್ದ ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ ಹಾಗೂ ಸಾಹಸವನ್ನ ಸ್ಮರಿಸೋಕೆ ಪ್ರತಿ ವರ್ಷ ಕಾರ್ಗಿಲ್‌ ಜುಲೈ 26ರಂದು ಕಾರ್ಗಿಲ್‌ ವಿಜಯ ದಿವಸ್‌ ಆಚರಿಸಲಾಗುತ್ತದೆ.

-masthmagaa.com

Contact Us for Advertisement

Leave a Reply