ಬೆಂಗಳೂರು: ಎಂಎಸ್‌ ಧೋನಿ ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್‌

masthmagaa.com:

ಬೆಂಗಳೂರಿನಲ್ಲಿರೋ ಕ್ರಿಕೆಟಿಗ ಧೋನಿ ಅವ್ರ ಸ್ಕೂಲ್‌ಗೆ ಕರ್ನಾಟಕ ಶಿಕ್ಷಣ ಇಲಾಖೆ ನೋಟಿಸ್‌ ನೀಡಿದೆ. ಶಾಲೆಗೆ ಇನ್ನು ಸಿಬಿಎಸ್‌ಇ ಪಾಠ ಮಾಡೋಕೆ ಲೈಸೆನ್ಸ್‌ ಸಿಕ್ಕಿಲ್ಲ. ಆದ್ರೂ ಸಿಬಿಎಸ್‌ ಶಾಲೆ ಅಂತ ಹೇಳಿ ಅಡ್ಮಿಷನ್‌ ಮಾಡ್ಕೊಂಡು ಅನಧಿಕೃತ ಪಠ್ಯ ಬೋಧನೆ ಮಾಡಲಾಗ್ತಿದೆ ಅಂತ ಶಾಲೆಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಬಗ್ಗೆ ಧೋನಿ ಶಾಲೆ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಶಿಕ್ಷಣ ಇಲಾಖೆ ಪಠ್ಯವನ್ನೇ ಓದಿಸುತ್ತಿದ್ದೇವೆ. ಪೋಷಕರ ಒತ್ತಾಯದ ಮೇರೆಗೆ ಹೆಚ್ಚಿನ ವಿಷಯ ಸೇರಿಸಿ ಓದಿಸ್ತಿದ್ದೀವಿ. ಎರಡು ತಿಂಗಳ ಬಳಿಕ ಸಿಬಿಎಸ್​ಇ ಲೈಸೆನ್ಸ್‌ ಸಿಗಲಿದೆ. ಹೀಗಾಗಿ ಈಗಿನಿಂದಲೇ ಮಕ್ಕಳಿಗೆ ಸಿಬಿಎಸ್​ಇ ಕ್ರಮ ಅನ್ವಯ ಮಾಡಿದ್ದೇವೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply