ಎಲೆಕ್ಷನ್‌ ಡೇಟ್‌ ಅನೌನ್ಸ್‌! ಆಮಿಷ ಒಡ್ಡಿದ್ರೆ ಕ್ರಿಮಿನಲ್‌ ಕೇಸ್‌ ಹಾಕ್ತೀವಿ ಎಂದ ಚುನಾವಣಾ ಆಯೋಗ!

masthmagaa.com:

ದೇಶದ ಹೈ ವೋಲ್ಟೇಜ್‌ ಎಲೆಕ್ಷನ್‌ ಅಂತ ಕರೆಯಲಾಗ್ತಿರೋ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಡೆಗೂ ದಿನಾಂಕ ಪ್ರಕಟವಾಗಿದೆ. ಇಂದು ಬೆಳಿಗ್ಗೆ ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥ ಪಿ ರಾಜೀವ್‌ ಕುಮಾರ್‌ ಎಲೆಕ್ಷನ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ. ಮೇ 10ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯುತ್ತೆ. ಮೇ 13ನೇ ತಾರೀಖು 224 ಕ್ಷೇತ್ರಗಳ ಫಲಿತಾಂಶ ಹೊರಬೀಳುತ್ತೆ. ಏಪ್ರಿಲ್‌ 13ಕ್ಕೆ ಗೆಜೆಟ್ ನೋಟಿಫಿಕೇಷನ್ ಅಗುತ್ತೆ,ಏಪ್ರಿಲ್‌ 20ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಏಪ್ರಿಲ್ 21ನೇ ತಾರೀಖು ನಾಮಪತ್ರಗಳ ಪರಿಶೀಲನೆ ಆಗುತ್ತೆ ನಾಮಪತ್ರ ವಾಪಸ್ ಪಡೆಯೋಕೆ ಏಪ್ರಿಲ್ 24 ಕೊನೆಯ ದಿನ ಆಗಿದೆ. ಇನ್ನು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಚುನಾವಣಾ ಅಕ್ರಮ ತಡೆಯೋಕೆ 2,400 ವಿಚಕ್ಷಣ ತಂಡ ನಿಯೋಜನೆ ಮಾಡಲಾಗಿದೆ. ಅಕ್ರಮಗಳ ಮೇಲೆ ನಿಗಾವಹಿಸಲು 2016 ಫ್ಲೈಯಿಂಗ್ ಸ್ಕ್ವಾಡ್​ ನಿಯೋಜಿಸಲಾಗಿದೆ. ಎಲ್ಲಾ ವಿಮಾನ ನಿಲ್ದಾಣ, ಬಂದರು, ಹೆದ್ದಾರಿಗಳಲ್ಲಿ ಕಣ್ಣಿಡಲಾಗಿದೆ. ಬ್ಯಾಂಕ್​ ವಹಿವಾಟಿನ ಮೇಲೆ, ಹಣದ ವ್ಯವಹಾರ, ಮದ್ಯ ಸಾಗಣೆ, ಗಿಫ್ಟ್ , ಹಣ ಹಂಚುವುದ ತಡೆಯಲು ಕ್ರಮ, ಹಾಗೂ ಮತದಾರರಿಗೆ ಆಮಿಷವೊಡ್ಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತೆ ಅಂತ ಚುನಾವಣಾ ಆಯೋಗ ತಿಳಿಸಿದೆ. ಇನ್ನು ಈಗಾಗಲೇ ಕಾಂಗ್ರೆಸ್ 124 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಜೆಡಿಎಸ್‌ ಕೂಡ ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನ ಘೋಷಿಸಿದೆ. ಬಿಜೆಪಿಯ ಮೊದಲ ಪಟ್ಟಿ ಏಪ್ರಿಲ್‌ 10ರ ಬಳಿಕ ಬಿಡುಗಡೆಯಾಗುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply