ಹೈಕೋರ್ಟ್‌ ವಿಚಾರಣೆಯ ಲೈವ್‌ ಸ್ಟ್ರೀಮಿಂಗ್‌ ಇನ್ಮುಂದೆ ಸ್ಟಾಪ್‌! ಯಾಕೆ?

masthmagaa.com:

ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಸಲಾಗೋ ಕಲಾಪಗಳು ಪಬ್ಲಿಕ್‌ ಕೂಡ ನೋಡ್ಲಿ ಅಂತ ಕಲ್ಪಿಸಲಾದ ಲೈವ್‌-ಸ್ಟ್ರೀಮಿಂಗ್‌ ಹಾಗೂ ವಿಡಿಯೋ ಕಾನ್ಫರೆನ್ಸ್‌ ಸ್ಟ್ರೀಮಿಂಗ್‌ನ್ನ ನಿಲ್ಲಿಸಬೇಕು ಅಂತ ಕೋರ್ಟ್‌ ಆದೇಶಿಸಿದೆ. ಹೈಕೋರ್ಟ್‌ನ ವಿಡಿಯೋ ಕಾನ್ಫರೆನ್ಸ್‌ ಆ್ಯಪ್‌ನಲ್ಲಿ ಅಶ್ಲೀಲವಾದ ವಿಡಿಯೋಗಳನ್ನ ಸೈಬರ್‌ ಕಳ್ಳರು ಅಪ್‌ಲೋಡ್‌ ಮಾಡಿರೋದು ವರದಿಯಾಗಿದೆ. ಆದ್ರಿಂದ ಮುಖ್ಯ ನ್ಯಾಯಾಧೀಶರಾದ ಪಿ.ಬಿ. ವರಾಳೆ ಅವ್ರು ಇಂದು ಬೆಳಿಗ್ಗೆ ಆದೇಶ ಹೊರಡಿಸಿ ಲೈವ್‌ ಸ್ಟ್ರೀಮಿಂಗ್‌ ಸ್ಟಾಪ್‌ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಅವ್ರು, ʻನಾವು ಎಲ್ಲಾ ಲೈವ್‌ ಸ್ಟ್ರೀಮಿಂಗ್‌ ಮತ್ತು ವೀಡಿಯೋ ಕಾನ್ಫರೆನ್ಸ್‌ ನಿಲ್ಲಿಸ್ತಿದ್ದೀವಿ. ಲೈವ್‌ ಸ್ಟ್ರೀಮಿಂಗ್‌ ಮಾಡೋದ್ರಿಂದ ಕೆಲ ತೊಂದರೆಗಳಾಗ್ತಿವೆ. ತಂತ್ರಜ್ಞಾನ ದುರ್ಬಳಕೆ ಮತ್ತು ಕೆಲವರಿಂದ ಅನುಚಿತ ವರ್ತನೆ ನಡೆದಿರೋದ್ರಿಂದ ಈ ನಿರ್ಧಾರ ಮಾಡಲಾಗಿದೆ. ಈ ಕುರಿತು ಕಂಪ್ಯೂಟರ್‌ ತಂಡ ಅಥ್ವಾ ಕೋರ್ಟ್‌ ರೆಜಿಸ್ಟ್ರಿಗೆ ಕಂಪ್ಲೈಂಟ್‌ ಮಾಡ್ಬೇಡಿ. ವ್ಯವಸ್ಥೆಯ ಹಿತಾಸಕ್ತಿಗಾಗಿ ಈ ರೀತಿ ಆದೇಶ ನೀಡಲಾಗಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply