ರಾಜ್ಯದಲ್ಲಿ ಮೂರು ತಿಂಗಳು ಹೀಟ್‌ ವೇವ್ಸ್‌! ಕಡಿಮೆ ಮಳೆ ಸೂಚನೆ!

masthmagaa.com:

ದೇಶದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗ್ತಿದ್ದು, ಇನ್ನು ಮೂರು ತಿಂಗಳ ಕಾಲ ಹೀಟ್‌ ವೇವ್ಸ್‌ ಅಥ್ವಾ ಬಿಸಿ ಗಾಳಿ ತೀವ್ರಗೊಳ್ಳಲಿದೆ. ಎಂದಿಗಿಂತ ಕಡಿಮೆ ಮಳೆಯಾಗೋ ಸಾಧ್ಯತೆಯಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಇದ್ರ ಎಫೆಕ್ಟ್‌ ಹೆಚ್ಚು ಕಾಣಲಿದೆ…ಪ್ರಮುಖವಾಗಿ ಏಪ್ರಿಲ್‌ ತಿಂಗಳಲ್ಲಿ. ಇನ್ನು ಕರ್ನಾಟಕ ಏಪ್ರಿಲ್‌, ಮೇ, ಜೂನ್‌ ತಿಂಗಳು ಭಾರೀ ಹೀಟ್‌ ವೇವ್ಸ್‌ ಎದುರಿಸಲಿದೆ. ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ. ಕರ್ನಾಟಕದ ಉತ್ತರ ಭಾಗದಲ್ಲಿ ಸಾಧಾರಣ ಮಟ್ಟಿಗೆ ಮಳೆಯಾಗೋ ಸಾಧ್ಯತೆಯಿದೆ. ಆದ್ರೆ ಕರ್ನಾಟಕದ ದಕ್ಷಿಣ ಮತ್ತು ಕರಾವಳಿ ಭಾಗದಲ್ಲಿ ಏಪ್ರಿಲ್‌ ತಿಂಗಳಲ್ಲಿ ಅತೀ ಕಡಿಮೆ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದ್ರಿಂದ ಈ ಸಮಯದಲ್ಲಿ ಹೆಚ್ಚು ಬಿಸಿಲಲ್ಲಿ ಓಡಾಡದೇ ಮನೆಯೊಳಗೆ ಇರೋದು ಉತ್ತಮ.

-masthmagaa.com

Contact Us for Advertisement

Leave a Reply