10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಸೆಳೆದ ʻಇನ್ವೆಸ್ಟ್‌ ಕರ್ನಾಟಕ 2022ʼ!

masthmagaa.com:

ʻಇನ್ವೆಸ್ಟ್‌ ಕರ್ನಾಟಕ 2022ʼ 3 ದಿನಗಳ ಕಾರ್ಯಕ್ರಮ ನೆನ್ನೆ ಮುಕ್ತಾಯವಾಗಿದ್ದು, 10 ಲಕ್ಷ ಕೋಟಿ ಬಂಡವಾಳ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದ್ರಿಂದ ಮುಂಬರೋ ವರ್ಷಗಳಲ್ಲಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗೋ ಸಾಧ್ಯತೆ ಇದೆ ಅಂತ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ. ಈ ಬಾರಿಯ ಇನ್ವೆಸ್ಟ್‌ ಒಪ್ಪಂದಗಳಲ್ಲಿ ಅತಿ ಹೆಚ್ಚು ಇಂಧನ ಕ್ಷೇತ್ರದಲ್ಲಿ ಆಗಿದೆ. ಕರ್ನಾಟಕದಲ್ಲಿ ಗ್ರೀನ್‌ ಹೈಡ್ರೋಜನ್‌ ಕ್ಷೇತ್ರದಲ್ಲಿ 40 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡೋದಾಗಿ ಅವಾಡ ಗ್ರೂಪ್‌ನ ಅಧ್ಯಕ್ಷ ವಿನೀತ್‌ ಮಿತ್ತಲ್‌ ತಿಳಿಸಿದ್ದಾರೆ. ಜೊತೆಗೆ ಗ್ರೀನ್ ಎನರ್ಜಿ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದಗಳಾಗಿವೆ. 2030ರ ವೇಳೆಗೆ ದೇಶದ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ 50%ರಷ್ಟು ಕರ್ನಾಟಕದಲ್ಲೇ ಉತ್ಪಾದನೆಯಾಗಲಿದೆ ಅಂತ ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply