ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಶಾಂತಿಯ ಪಾಠ ಮಾಡಿದ ಇರಾನ್!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತದ ಕಾಶ್ಮೀರ ವಿಚಾರವಾಗಿ ಇರಾನ್‌ ಕೂಡ ಮಾತಾಡಿದ್ದು ಭಾರತಕ್ಕೆ ಶಾಂತಿ ಪಾಠ ಮಾಡಿದೆ. ಮೊನ್ನೆಯಷ್ಟೇ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇರಾನ್‌ ಅಧ್ಯಕ್ಷ ರೈಸಿ ಪಾಕ್‌ ಪ್ರಧಾನಿ ಮಾತಿಗೆ ಯಾವುದೇ ಉತ್ತರ ಕೊಟ್ಟಿರಲಿಲ್ಲ. ಬರೀ ಪಾಲೇಸ್ತೇನ್‌ ವಿಚಾರವಾಗಿ ಮಾತ್ರ ಮಾತಾಡಿದ್ರು. ಆದ್ರೆ ಈಗ ಕಾಶ್ಮೀರ ವಿಚಾರವಾಗಿ ಮತ್ತೆ ಜಂಟಿ ಹೇಳಿಕೆಯನ್ನ ಎರಡೂ ದೇಶಗಳು ರಿಲೀಸ್‌ ಮಾಡಿವೆ. “ಕಾಶ್ಮೀರದ ಸಮಸ್ಯೆಯನ್ನ ಅಲ್ಲಿನ ಜನರ ಇಚ್ಛೆಯಂತೆ ಅಂತರಾಷ್ಟೀಯ ಕಾನೂನಿನ ಅನುಸಾರವಾಗಿ ಶಾಂತಿಯುತ ಮಾತುಕತೆ ಮೂಲಕ ಬಗೆಹರಿಸಬೇಕುʼ ಅಂತ ಪಾಕ್ ಮತ್ತು ಇರಾನ್‌ಗಳು ಹೇಳಿಕೆ ನೀಡಿವೆ. ಈ ಮೂಲಕ ಭಾರತದ ವಿರುದ್ದ ನೇರವಾಗಿ ಮಾತಾಡದೇ ಇದ್ರೂ ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸೋ ಮೂಲಕ ಇರಾನ್‌ ಪರೋಕ್ಷವಾಗಿ ಭಾರತವನ್ನ ಕೆಣಕಿದೆ. ಯಾಕಂದ್ರೆ ಭಾರತದ ನೀತಿ ಪ್ರಕಾರ ಕಾಶ್ಮೀರ ಅನ್ನೋದು ಎರಡು ದೇಶಗಳ ಸಮಸ್ಯೆ. ಇದರಲ್ಲಿ ಮೂರನೇ ರಾಷ್ಟ್ರ ಬರಬಾರದು ಅಂತ ಭಾರತ ಹೇಳ್ತಾ ಬರ್ತಿದೆ. ಆದ್ರೆ ಈ ವಿಚಾರದಲ್ಲಿ ಪಾಕಿಸ್ತಾನದ ನಿಲುವು ಬೇರೆ ಇದೆ. ಇದಕ್ಕೆ ಅಂತರಾಷ್ಟ್ರೀಯ ಸಮುದಾಯ ತಲೆ ಹಾಕಿ ಭಾರತದಿಂದ ಇದನ್ನ ಸ್ವತಂತ್ರ ಮಾಡ್ಬೇಕು ಅನ್ನೋದು ಪಾಕ್‌ನ ಆಸೆ. ಹೀಗಾಗಿನೇ ಅನೇಕ ದೇಶಗಳು ಕಾಶ್ಮೀರ ವಿಚಾರ ಇಂಟರ್‌ನ್ಯಾಷನಲ್‌ ವಿಚಾರ ಅಲ್ಲ. ಅದು ಎರಡೂ ದೇಶಗಳ ನಡುವಿನ ವಿಚಾರ ಅಷ್ಟೇ ಅಂತ ಭಾರತದ ನಿಲುವಿಗೆ ಸಪೋರ್ಟ್‌ ಮಾಡ್ತಾ ಬರ್ತಿವೆ. ಅವರು ಮಾತಾಡ್ತಾ ಇರಲಿಲ್ಲ. ಮೊನ್ನೆ ಕೂಡ ಇರಾನ್‌ ಅದೇ ಜಾಣತನವನ್ನ ಪ್ರದರ್ಶನ ಮಾಡಿತ್ತು. ಆದ್ರೆ ಏಪ್ರಿಲ್‌ 24ರಂದು ಅಂದ್ರೆ ಇರಾನ್‌ ಅಧ್ಯಕ್ಷರ ಪಾಕ್‌ ಪ್ರವಾಸದ ಕೊನೇ ದಿನದಿಂದು ಕಾಶ್ಮೀರ ವಿಚಾರವಾಗಿ ಇರಾನ್‌ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. ಇದಕ್ಕೆ ಭಾರತ ಯಾವ ರೀತಿಯಲ್ಲಿ ಉತ್ತರ ಕೊಡುತ್ತೆ ಅನ್ನೋದನ್ನ ನೋಡ್ಬೇಕು. ಆದ್ರೆ ಇಲ್ಲಿ ಈ ರೀತಿ ನಡೀತಾ ಇದ್ರೆ ಇನ್ನೊಂದು ಕಡೆ ಭಾರತ ಇರಾನ್‌ ಪರ ಬ್ಯಾಟಿಂಗ್‌ ಮಾಡಿದೆ. ಪರ್ಷಿಯನ್‌ ಕೊಲ್ಲಿಯಲ್ಲಿ ಶಾಂತಿ ಕಾಪಾಡಲು ಇರಾನ್ ಸ್ಥಿರವಾದ ಶಕ್ತಿ. ಆ ಭಾಗದಲ್ಲಿ ಶಾಂತಿ ಕಾಪಾಡುವಲ್ಲಿ ಇರಾನ್‌ ಸೇನೆಯ ಪಾತ್ರ ತುಂಬಾ ಮಹತ್ವದ್ದಾಗಿದೆ ಅಂತ ಇಂಡಿಯನ್‌ ಮಿಲಿಟರಿ ಇಂಟಲಿಜೆನ್ಸ್ ಚೀಫ್‌ ಲೆಫ್ಟಿನಂಟ್‌ ಜನರಲ್‌ R.S ರಮಣ್‌ ತಿಳಿಸಿದ್ದಾರೆ. ದಿಲ್ಲಿಯ ಇರಾನ್‌ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಇರಾನ್‌ ಮಿಲಿಟರಿ ಡೇ ಕಾರ್ಯಕ್ರಮದಲ್ಲಿ ಈ ವಿಚಾರವನ್ನ ತಿಳಿಸಿದ್ದಾರೆ. ಇರಾನ್‌ ಮತ್ತು ಭಾರತಗಳೆರಡು ಒಂದರ ಬೆನ್ನಿಗೊಂದು ನಿಂತಿವೆ. ಜೊತೆಗೆ ನಾರ್ತ್‌ ಸೌತ್‌ ಟ್ರಾನ್ಸ್‌ಪೋರ್ಟ್‌ ಕಾರಿಡಾರ್‌(INSTC) ಮತ್ತು ಇರಾನ್‌ನ ಚಹಬಹಾರ್‌ ಬಂದರು ಉಭಯ ದೇಶಗಳ ನಡುವಿನ ಸಹಕಾರಕ್ಕೆ ಸಾಕ್ಷಿಯಾಗಿವೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply