ರಾಷ್ಟ್ರಪತಿಗಳ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕೇರಳ ಸರ್ಕಾರ!

masthmagaa.com:

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯವೊಂದು ರಾಷ್ಟ್ರಪತಿಗಳ ವಿರುದ್ದ ಸುಪ್ರೀಂ ಮೆಟ್ಟಿಲು ಹತ್ತಿದೆ. ಪಾಸ್‌ ಆಗಿರೋ ಬಿಲ್‌ಗಳಿಗೆ ರಾಷ್ಟ್ರಪತಿಗಳ ಒಪ್ಪಿಗೆ ತಡೆಹಿಡಿದಿರೋ ವಿರುದ್ಧ ಇದೀಗ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಕೇರಳದ ವಿಧಾನಸಭೆಯಲ್ಲಿ ಪಾಸ್‌ ಮಾಡಲಾದ 4 ಬಿಲ್‌ಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರು ಒಪ್ಪಿಗೆಯನ್ನ ತಡೆಹಿಡಿದಿದ್ದಾರೆ ಅಂತ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಅಲ್ದೇ ಈ ಕುರಿತು ಕೇರಳ ರಾಜ್ಯಪಾಲರಾದ ಆರಿಫ್‌ ಮೊಹಮ್ಮದ್‌ ಖಾನ್‌ ಅವ್ರು ಬಿಲ್‌ಗಳನ್ನ ದೀರ್ಘಕಾಲದವರೆಗೆ ಬಾಕಿ ಇರಿಸಿದ್ದಾರೆ. ನಂತ್ರ ಅವುಗಳನ್ನ ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯ್ದಿರಿಸಿದ್ದಾರೆ ಅಂತ ಆರಿಫ್‌ ಅವ್ರ ವಿರುದ್ದಾನೂ ಅರ್ಜಿ ಸಲ್ಲಿಸಿದೆ.

-masthmagaa.com

Contact Us for Advertisement

Leave a Reply