ಕಿಮ್ಮಣ್ಣನ ಜೊತೆ ಜಪಾನ್‌ ಪ್ರಧಾನಿ ಮಾತುಕತೆ ನಡೆಸ್ತಾರೆ: ಕಿಮ್ಮಣ್ಣನ ಸಹೋದರಿ

masthmagaa.com:

ಜಪಾನ್‌ ಪ್ರಧಾನಿ ಫಿಮಿಯೋ ಕಿಶಿದಾ ಅವ್ರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವ್ರನ್ನ ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಹೀಗಂತ ಖುದ್ದು ಕಿಮ್‌ ಜಾಂಗ್‌ ಉನ್‌ ಅವ್ರ ಸಹೋದರಿ ಕಿಮ್‌ ಯೊ ಜೊಂಗ್‌ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಲ್ಧೇ ಶೀಘ್ರದಲ್ಲೆ ಕಿಶಿದ ಯಾವುದೇ ಫಲಾಪೇಕ್ಷೆ ಬಯಸದೇ ನಾರ್ತ್‌ ಕೊರಿಯಾಗೆ ಒಂದು ದಿನ ಭೇಟಿ ನೀಡೊ ಸಾಧ್ಯತೆ ಇದೆ,ಕಿಮ್ ಜಾಂಗ್‌ ಉನ್‌ ಜೊತೆ ಮಾತುಕತೆ ನಡೆಸಲಿದ್ದಾರೆ. ಉತ್ತರ ಕೊರಿಯಾ ಜೊತೆ ಜಪಾನ್‌ ಹೊಸ ವಿಚಾರಗಳೊಂದಿಗೆ ರಾಜತಾಂತ್ರಿಕ ಮಾತುಕತೆಗೆ ಮುಂದಾದ್ರೆ ಉಭಯ ದೇಶಗಳ ಬಾಂಧವ್ಯಕ್ಕೆ ಭವಿಷ್ಯ ರೂಪಿಸ್ಬಹುದು ಅಂತ ಕಿಮ್‌ ಯೋ ಜಾಂಗ್ ಹೇಳಿದ್ದಾರೆ. ಅಂದ್ಹಾಗೆ ಉತ್ತರ ಕೊರಿಯಾದ ಶತ್ರು ರಾಷ್ಟ್ರಗಳಲ್ಲಿ ದಕ್ಷಿಣ ಕೊರಿಯಾ, ಅಮೆರಿಕ ಜೊತೆಗೆ ಜಪಾನ್‌ ಕೂಡ ಇದೆ. ಇವು ಮೂರು ದೇಶಗಳು ನಾರ್ತ್‌ ಕೊರಿಯಾ ವಿರುದ್ದ ಸಮರಾಭ್ಯಾಸವನ್ನ ಮಾಡ್ತಿರ್ತಾರೆ. ಸೋ ಇದರ ನಡುವೆಯೇ ಕಿಮ್‌ ತಂಗಿ ಈ ರೀತಿ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜಪಾನ್‌ ಮತ್ತು ಮಿತ್ರರ ನಡುವೆ ಬೆಂಕಿ ಹಚ್ಚೊಕೆ ಕಿಮ್‌ ಈ ರೀತಿ ಹೇಳಿದ್ದಾರಾ ಗೊತ್ತಿಲ್ಲ. ಇನ್ನು ಜಪಾನ್‌ ಕೂಡ ಇದರ ಬಗ್ಗೆ ಇನ್ನಷ್ಟೇ ಕ್ಲಾರಿಟಿ ಕೊಡಬೇಕು.

-masthmagaa.com

Contact Us for Advertisement

Leave a Reply