ವೆಸ್ಟ್‌ ಇಂಡೀಸ್‌ ವಿರುದ್ದದ ಟಿ 20 ಪಂದ್ಯಕ್ಕೆ ರಾಹುಲ್‌ ಇನ್‌..ಕೊಹ್ಲಿಗೆ ವಿರಾಮ!

masthmagaa.com:

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿಗೆ ಬಿಸಿಸಿಐನ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟಾರ್‌ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಅನುಭವಿ ಸ್ಪಿನ್ನರ್‌ ಆರ್‌ ಅಶ್ವಿನ್‌ ಟಿ-20 ತಂಡಕ್ಕೆ ಮರಳಿದ್ದಾರೆ. ಇನ್ನು ಕನ್ನಡಿಗ ಕೆಎಲ್ ರಾಹುಲ್, ಕುಲದೀಪ್ ಯಾದವ್ ಕೂಡ ತಂಡಕ್ಕೆ ಮರಳಿದ್ದು, ಅವರ ಸೇರ್ಪಡೆ ಫಿಟ್‌ನೆಸ್‌ ಮೇಲೆ ಅವಲಂಬಿತವಾಗಿರಲಿದೆ. ಇನ್ನು ವಿಂಡೀಸ್‌ ವಿರುದ್ದದ ಈ ಟಿ-20 ಸರಣಿಗೆ ಯುವ ಆಟಗಾರರಿಗೆ ಮಣೆ ಹಾಕಲಾಗಿದ್ದು, ಬಹುತೇಕ ಇಂಗ್ಲೆಂಡ್ ವಿರುದ್ಧ ಟಿ20ಯಲ್ಲಿ ಆಡಿದ್ದ ಆಟಗಾರರೇ ಸೆಲೆಕ್ಟ್‌ ಆಗಿದ್ದಾರೆ. ಅಂದ್ಹಾಗೆ ಈ ಟಿ20 ಸರಣಿ ಜುಲೈ 29 ರಿಂದ ಆರಂಭವಾಗಲಿದೆ. ಅತ್ತ ಇಂಗ್ಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯ ಲಂಡನ್‌ ಲಾರ್ಡ್ಸ್‌ನಲ್ಲಿ ಶುರುವಾಗಿದ್ದು ಟೀಂ ಇಂಡಿಯಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ. ಗಾಯದಿಂದ ಮೊದಲ ಪಂದ್ಯದಲ್ಲಿ ಹೊರಗುಳಿದಿದ್ದ ವಿರಾಟ್‌ ಕೊಹ್ಲಿ ಪ್ಲೇಯಿಂಗ್‌ ಎಲೆವನ್‌ಗೆ ವಾಪಸ್ಸಾಗಿದ್ದಾರೆ.

-masthmagaa.com

Contact Us for Advertisement

Leave a Reply