ವಿಂಟರ್ ಒಲಿಂಪಿಕ್ಸ್​​​​​​ ಹೊತ್ತಲ್ಲೇ ಬೀಜಿಂಗ್​​ನಲ್ಲಿ ಕೊರೋನಾ ಸ್ಫೋಟ!

masthmagaa.com:

ಚೀನಾದ ಬೀಜಿಂಗ್​ನಲ್ಲಿ ಮುಂದಿನ ವಾರ ವಿಂಟರ್ ಒಲಿಂಪಿಕ್ಸ್​​​ ಶುರುವಾಗಲಿದೆ. ಆದ್ರೆ ಇವತ್ತು ಬೀಜಿಂಗ್​​ನಲ್ಲಿ ಕಳೆದ ಒಂದೂವರೆ ವರ್ಷದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಅಂದ್ರೆ ಸಾವ್ರಾರು ಬಂದಿದೆ ಅಂತ ಅಲ್ಲ.. ಒಂದೇ ದಿನ 20 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಬೀಜಿಂಗ್​ನಲ್ಲಿ 2020ರ ಜೂನ್​​ನಿಂದ ಒಂದೇ ದಿನ ಇಷ್ಟು ಕೊರೋನಾ ಪತ್ತೆಯಾಗಿರೋದು ಇದೇ ಮೊದಲು.. ಚೀನಾ ಒಲಿಂಪಿಕ್ಸ್ ವೇಳೆ ಕೊರೋನಾ ಸ್ಫೋಟವಾಗಬಾರದು ಅಂತ ಮೊದಲಿಂದಲೂ ಮುನ್ನೆಚ್ಚರಿಕೆ ವಹಿಸುತ್ತಲೇ ಬಂದಿದೆ. ಕ್ರೀಡಾಕೂಟಕ್ಕೆ ಸಂಬಂಧಿಸಿದ ಎಲ್ಲರನ್ನೂ ಜನವರಿ 4ರಿಂದ ಚೀನಾದ ಉಳಿದ ಜನರಿಂದ ದೂರಾನೇ ಇಡಲಾಗಿದೆ. ಸುಮಾರು 60 ಸಾವಿರ ಜನ ಈ ಕ್ರೀಡಾಕೂಟದ ಬಬಲ್​​ನಲ್ಲಿದ್ದು, ಪ್ರತಿದಿನ ಪರೀಕ್ಷೆ ನಡೆಸಲಾಗ್ತಿದೆ. ಅವರಲ್ಲಿ ಈವರೆಗೆ 100 ಮಂದಿಗೆ ಕೊರೋನಾ ಬಂದಿದೆ. ಅಂದಹಾಗೆ ಇಡೀ ದೇಶದಲ್ಲಿ ಇವತ್ತು ಸ್ಥಳೀಯವಾಗಿ 54 ಮಂದಿಗೆ ಕೊರೋನಾ ಬಂದಿದೆ.

-masthmagaa.com

Contact Us for Advertisement

Leave a Reply