ಕೊನೆಗೂ ಒಲಿಂಪಿಕ್ಸ್‌ಗೆ ಎಂಟ್ರಿ ಕೊಡ್ತು ಕ್ರಿಕೆಟ್‌!

masthmagaa.com:

ಶತಮಾನದ ಬಳಿಕ ಕ್ರಿಕೆಟ್‌ನ್ನ ಒಲಿಂಪಿಕ್ಸ್‌ಗೆ ಸೇರಿಸಲು ಅಧಿಕೃತವಾಗಿ ನಿರ್ಧರಿಸಲಾಗಿದೆ. 2028ರ ಒಲಿಂಪಿಕ್ಸ್‌ ಗೇಮ್‌ನಲ್ಲಿ ಕ್ರಿಕೆಟ್‌ಗೆ ಸ್ಥಾನವನ್ನ ನೀಡಲು ಅಂತರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸೋಮವಾರ ಅಂದ್ರೆ ಇಂದು ಮುಂಬೈನಲ್ಲಿ ನಡೆದ 141ನೇ ಒಲಿಂಪಿಕ್ಸ್‌ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನ ಅಧಿಕೃತಗೊಳಿಸಲಾಗಿದೆ. 2028ರಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ T20 ಮಾದರಿಯ ಕ್ರಿಕೆಟ್‌ ಪಂದ್ಯ ಇರಲಿದೆ. 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಭಾಗಿಯಾಗಲಿದೆ ಅಂತ ಅಕ್ಟೋಬರ್‌ 10 ರಂದೇ ಎಲ್ಲರಿಗೂ ತಿಳಿದಿತ್ತು. ಆದರೆ ಇಂದು ಅಧಿಕೃತಗೊಂಡಿದೆ. ಕ್ರಿಕೆಟ್‌ನೊಂದಿಗೆ ಒಟ್ಟು 5 ಕ್ರೀಡೆಗಳನ್ನ ಸೇರಿಸಲಾಗಿದೆ. ಸಾಫ್ಟ್‌ಬಾಲ್‌, ಲ್ಯಾಕ್ರೋಸ್‌, ಫ್ಲ್ಯಾಗ್‌ ಫುಟ್‌ಬಾಲ್‌, ಬೇಸ್‌ಬಾಲ್‌ ಹಾಗೂ ಸ್ಕ್ವಾಷ್‌ ಕೂಡ ಸೇರಿಕೊಂಡಿದೆ. ಕ್ರಿಕೆಟ್‌ನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಬೇಕೆಂಬ ಹಲವು ವರ್ಷಗಳ ಚರ್ಚೆಗೆ ಕೊನೆಗೂ ಬ್ರೇಕ್‌ ಬಿದ್ದಿದೆ. ಈ ವಿಚಾರ ಕ್ರಿಕೆಟ್‌ ಪ್ರೇಮಿಗಳಿಗಂತೂ ಅತಿಯಾದ ಸಂತೋಷವನ್ನ ತಂದಿದೆ.

-masthmagaa.com

Contact Us for Advertisement

Leave a Reply