ಬಾಹ್ಯಾಕಾಶದಲ್ಲಿ ಟೂಲ್‌ಬ್ಯಾಗ್‌ ಮರೆತ ಗಗನಯಾನಿಗಳು!

masthmagaa.com:

ISS ಅಥ್ವಾ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾನಿಗಳಿಬ್ರು ಸ್ಪೇಸ್‌-ವಾಕ್‌ ಮಾಡುವಾಗ ತಮ್ಮ ಟೂಲ್‌ಬ್ಯಾಗನ್ನ ಮರೆತಿದ್ದಾರೆ. ಈ ಟೂಲ್‌ಬ್ಯಾಗ್‌ ಈಗ ಬಾಹ್ಯಾಕಾಶದಲ್ಲಿ ತೇಲ್ತಾ ಇದೆ. ನವೆಂಬರ್‌ 1ರಂದು ನಾಸಾದ Jasmin Moghbeli ಮತ್ತು Loral O’Hara ಅನ್ನೊ ಆಸ್ಟ್ರೊನಾಟ್‌ಗಳು ISS ನಲ್ಲಿ ಅಪರೂಪದ all-female spacewalk ಕಾರ್ಯಾಚರಣೆ ನಡೆಸಿದ್ರು. ಅಲ್ಲಿನ ಸೌರಫಲಕಗಳನ್ನ ರಿಪೇರಿ ಮಾಡೋ ಕೆಲಸಕ್ಕೆ ಅವ್ರು ಕೈ ಹಾಕಿದ್ರು. ಈ ವೇಳೆ ಅವ್ರು ಬಳಸ್ತಿದ್ದ ಟೂಲ್‌ಬ್ಯಾಗ್‌ ಒಂದು ಅವರ ಕಣ್‌ ತಪ್ಪಿಸಿ ನಿರ್ವಾತದಲ್ಲಿ ಅಂದ್ರೆ ಸ್ಪೇಸ್‌ನಲ್ಲಿ ಮರೆಯಾಗಿದೆ.‌ ಆದ್ರೆ ISS ಒಳಗಿದ್ದ ಕ್ರೂ, ಬ್ಯಾಗ್‌ನ ಟ್ರಾಜೆಕ್ಟರಿಯನ್ನ ಗಮನಿಸಿ, ಅದು ವಾಪಾಸ್‌ ಬಂದು ನಿಲ್ದಾಣಕ್ಕೆ ಅಪ್ಪಳಿಸಿ ಹಾನಿ ಮಾಡೋ ಚಾನ್ಸಸ್‌ ಇಲ್ಲ ಅಂತೇಳಿದ್ದಾರೆ. ಈ ಬ್ಯಾಗ್‌ ನವೆಂಬರ್‌ 7 ರಂದು ಜಪಾನ್‌ನ ಮೌಂಟ್‌ ಫಿಜಿ ಮೇಲಿನ ಬಹ್ಯಾಕಾಶದಲ್ಲಿ ತೇಲ್ತಾ ಇರೋ ಫೋಟೊವನ್ನ ಜಪಾನ್‌ ಆಸ್ಟ್ರೊನಾಟ್‌ ಒಬ್ರು ಸೆರೆ ಹಿಡಿದಿದ್ದಾರೆ.

-masthmagaa.com

Contact Us for Advertisement

Leave a Reply