ಕತ್ತಲಲ್ಲಿ ಮುಳುಗಿದ ಅಣ್ವಸ್ತ್ರ ದೇಶ! ಪಾಕ್‌ಗೆ ಕರೆಂಟ್‌ ಶಾಕ್‌!

masthmagaa.com:

ಪರಮಾಣು ಶಕ್ತ, ವಿಶ್ವದ ಆರನೇ ಅತಿದೊಡ್ಡ ಸೇನೆ ಹೊಂದಿರೋ, ಮುಸ್ಲಿಂ ಜಗತ್ತಿನ ರಕ್ಷಕ ಅಂತ ಕರೆಯಲಾಗುವ ಪಾಕಿಸ್ತಾನ ಸಧ್ಯಕ್ಕೆ ಸರ್ವನಾಶವಾಗುವ ಎಲ್ಲಾ ಲಕ್ಷಣಗಳು ಸಹ ದೊಡ್ಡದಾಗಿ ಕಾಣಿಸ್ತಾ ಇದೆ. ಈಗಾಗಲೇ ಆರ್ಥಿಕ ಸಮಸ್ಯೆ, ಉಗ್ರ ದಾಳಿ, ಸಾಲ ಸಾಲ ಅನ್ಕೊಂಡು ದಿನಾ ಸುದ್ದಿಯಲ್ಲಿರೊ ಪಾಕ್‌ಗೆ ಈಗ ಕರೆಂಟ್‌ ಕೂಡ ಶಾಕ್‌ ಕೊಟ್ಟಿದೆ. ಪಾಕಿಸ್ತಾನದಲ್ಲಿ ಇಂದು ತೀವ್ರ ವಿದ್ಯುತ್‌ ಸಮಸ್ಯೆ ಎದುರಾಗಿದೆ. ಅಲ್ಲಿನ ಸ್ಥಳೀಯ ಕಾಲ ಮಾನ ಬೆಳಿಗ್ಗೆ 7.30ರಿಂದ ಪಾಕ್‌ನ ಕಣ್ಣಿನಂತಿರೋ ಕರಾಚಿ, ಲಾಹೋರ್‌ನಂತಹ ಮಹಾನಗರಗಳಲ್ಲೇ ತೀವ್ರ ವಿದ್ಯುತ್‌ ಸಮಸ್ಯೆ ಎದುರಾಗಿದೆ. ವಿದ್ಯುತ್‌ ಸರಬರಾಜು ಮಾಡುವ ಟ್ರಾನ್ಸಮಿಷನ್‌ ಲೈನ್‌ಗಳಲ್ಲಿ ತೊಂದರೆ ಉಂಟಾಗಿ, ಕರೆಂಟ್‌ ಸಮಸ್ಯೆ ಸಂಭವಿಸಿದೆ ಅಂತ ಪಾಕ್‌ ಸರ್ಕಾರ ಹೇಳಿದೆ. ಪಾಕ್‌ನ ಗುಡ್ಡು ನಗರದಿಂದ ಕ್ವೆಟ್ಟಾಗೆ ಕನೆಕ್ಟ್‌ ಆಗೊ 2 ಟ್ರಾನ್ಸಮಿಷನ್‌ ಲೈನ್‌ಗಳಲ್ಲಿ ತೊಂದರೆ ಉಂಟಾಗಿದೆ. ಇದ್ರಿಂದ ಬಲೂಚಿಸ್ತಾನ್ ಪ್ರಾಂತ್ಯದ 22 ಜಿಲ್ಲೆಗಳು, ಕರಾಚಿ ಹಾಗೂ ಲಾಹೋರ್‌ ಸೇರಿದಂತೆ ದೇಶಾದ್ಯಂತ ಜನರು ಕರೆಂಟ್‌ನ ಅಭಾವ ಎದುರಿಸ್ತಿದಾರೆ. ಸಮಸ್ಯೆಯನ್ನ ಬಗೆಹರಿಸೋ ಕೆಲಸ ಮಾಡಲಾಗ್ತಿದೆ ಅಂತ ಪಾಕ್‌ನ ಇಂಧನ ಸಚಿವಾಲಯ ಹೇಳಿದೆ. ಇತ್ತ ಚಳಿಗಾಲದಲ್ಲಿ ಕರೆಂಟ್‌ ಬೇಡಿಕೆ ದೇಶಾದ್ಯಂತ ಕಡಿಮೆ ಆಗುತ್ತೆ. ಹಾಗಾಗಿ ಪವರ್‌ ಜನರೇಶನ್‌ ಸಿಸ್ಟಂಗಳನ್ನ ರಾತ್ರಿ ವೇಳೆ ಬಂದ್‌ ಮಾಡಲಾಗುತ್ತೆ. ಬೆಳಿಗ್ಗೆ ಆನ್‌ ಮಾಡೋವಾಗ, ಫ್ರಿಕ್ವೆನ್ಸಿ ಮತ್ತು ವೋಲ್ಟೇಜ್‌ನಲ್ಲಿ ಸಮಸ್ಯೆಯಾಗಿದೆ ಅಂತ ಇಂಧನ ಸಚಿವ ಖುರ್ರಮ್‌ ದಸ್ತ್‌ಗಿರ್‌ ಹೇಳಿದ್ದಾರೆ. ಜೊತೆಗೆ ಮುಂದಿನ 12 ಗಂಟೆಗಳಲ್ಲಿ ಕರೆಂಟ್‌ ಮರಳಲಿದೆ ಅಂತ ಪಾಕ್‌ ಜನತೆಗೆ ಭರವಸೆ ನೀಡಿದ್ದಾರೆ. ಅಂದ್ಹಾಗೆ ಇಂಧನ ಬಿಕ್ಕಟ್ಟನ್ನ ಎದುರಿಸ್ತಿರೋ ಪಾಕ್‌ ವಿದ್ಯುತ್‌ ಉಳಿತಾಯ ಮಾಡೋಕೆ ಕೆಲ ದಿನಗಳ ಹಿಂದೆ, 8 ಗಂಟೆಗೆ ಮಾರ್ಕೆಟ್‌ಗಳನ್ನ ಕ್ಲೋಸ್‌ ಮಾಡಬೇಕು. ಮದುವೆ ಸಮಾರಂಭಗಳಲ್ಲಿ 10 ಗಂಟೆ ಮೇಲೆ ಕರೆಂಟ್‌ ಬಳಸಬಾರ್ದು ಅಂತೆಲ್ಲಾ ರೂಲ್ಸ್‌ ತಂದಿದೆ. ಇನ್ನು ಈ ರೀತಿ ಪವರ್‌ ಕಟ್‌ ಸಮಸ್ಯೆಯನ್ನ ಕಳೆದ ವರ್ಷ ಅಕ್ಟೋಬರ್‌ನಲ್ಲೂ ಪಾಕ್‌ ಫೇಸ್‌ ಮಾಡಿತ್ತು. ಆವಾಗ್ಲೂ ಕರಾಚಿ, ಲಾಹೋರ್‌ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ 12 ಗಂಟೆಗೂ ಅಧಿಕ ಕಾಲ ಕರೆಂಟ್ ಸ್ಥಗಿತಗೊಂಡಿತ್ತು.

ಇನ್ನು ಪಾಕ್‌ನ ಕರೆಂಟ್‌ ಕಥೆ ಇದಾದ್ರೆ, ಆ ಕಡೆ ಪಾಕ್‌ನ ವಿದೇಶಿ ವಿನಿಮಯ ಮತ್ತಷ್ಟು ಕುಸಿತಗೊಂಡಿದ್ದು, 4.34 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 35,000 ಕೋಟಿ. ರೂಗೆ ತಲುಪಿದೆ. ಈ ಹಣ ಮುಂದಿನ ಮೂರು ವಾರಗಳ ಆಮದಿಗೆ ಮಾತ್ರ ಸಾಕಾಗುತ್ತೆ ಅಂತ ಹೇಳಲಾಗಿದೆ. ಇದ್ರಿಂದ ಅಲ್ಲಿನ ಅವಶ್ಯಕ ವಸ್ತುಗಳ ಬೆಲೆಗಳಲ್ಲಿ ದಿಢೀರ್‌ ಅಂತ 31% ಏರಿಕೆಯಾಗಿದೆ. ಇನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಹಾಗೂ ವಿದೇಶಗಳಿಂದ ಚಂದಾ ಎತ್ತುತ್ತಾ ಒಂದಷ್ಟು ಜೋಳಿಗೆ ತುಂಬಿಸಿಕೊಂಡು ಬರೋ ಪಾಕ್‌, ಇದೇ ವರ್ಷ ಅಂತಾರಾಷ್ಟ್ರೀಯ ಸಾಲದ ಸುಳಿಯಲ್ಲಿ ತನಗೆ ತಾನೇ ಸಿಲುಕಿಹಾಕಿಸಿಕೊಳ್ಳುತ್ತೆ ಅಂತ ಹೇಳಲಾಗ್ತಿದೆ. ಈಗಾಗಲೇ ಪಾಕ್‌ 100 ಬಿಲಿಯನ್‌ ಡಾಲರ್‌ ಅಂತಾರಾಷ್ಟ್ರೀಯ ಸಾಲ ಹೊಂದಿದ್ದು, ಹೆಚ್ಚಿನ ಸಾಲಕ್ಕಾಗಿ ಮತ್ತೆ ಕೈಚಾಚ್ತಿದೆ. ಇದು ಪಾಕ್‌ನ ಪರಿಸ್ಥಿತಿಯನ್ನ ಮತ್ತಷ್ಟು ಹದಗೆಡಿಸಬೋದು ಅಂತ ಅಂದಾಜು ಮಾಡಲಾಗಿದೆ. ಇದೆಲ್ಲದ್ರ ಮದ್ಯೆ ಇನ್ನೊಂದ್‌ ಇಂಟರೆಸ್ಟಿಂಗ್‌ ವಿಷಯ ಇದೆ. ಅದೇನಂದ್ರೆ, ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಕಳೆದ 6 ತಿಂಗಳಲ್ಲಿ ಸುಮಾರು 1.2 ಬಿಲಿಯನ್‌ ಡಾಲರ್‌ ಮೌಲ್ಯದ ಲಕ್ಶುರಿ ಕಾರ್‌ಗಳನ್ನ, ಹೈ ಎಂಡ್‌ ಎಲೆಕ್ಟ್ರಿಕ್‌ ವಾಹನಗಳನ್ನ ಪಾಕ್ ಆಮದು ಮಾಡಿಕೊಂಡಿದೆ ಅಂತ ವರದಿಯಾಗಿದೆ.

ಇನ್ನೊಂದ್‌ ಕಡೆ ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್ ವಿರುದ್ದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಮತ್ತೆ ವಾಗ್ದಾಳಿ ಮಾಡಿದ್ದಾರೆ. ಶರೀಫ್‌ ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡ್ಕೊಂಡು ಜಗತ್ತಿನಲ್ಲಿರೊ ವಿವಿಧ ದೇಶಗಳಿಗೆ ಸುತ್ತಿದಾರೆ. ಆದ್ರೆ ಅವ್ರಿಗೆ ಯಾರೂ 1 ಪೈಸೆನೂ ಹಾಕ್ತಿಲ್ಲ ಅಂತ ಹೇಳಿದ್ದಾರೆ. ಪ್ರಧಾನಿ ಶರೀಫ್‌ರು ಕೇವಲ ಹಣಕ್ಕಾಗಿ ಭಿಕ್ಷೆ ಬೇಡ್ತಾ ಇಲ್ಲ, ಭಾರತದ ಜೊತೆ ಮಾತುಕತೆಗೋಸ್ಕರ ಕೂಡ ಭಿಕ್ಷೆ ಬೇಡ್ತಾರೆ ಅಂತ ಖಾನ್‌ ವ್ಯಂಗ್ಯವಾಡಿದ್ದಾರೆ. ಅಂದಹಾಗೆ ಇತ್ತೀಚೆಗೆ ಶರೀಫ್‌, ಕಾಶ್ಮೀರಿ ಸಮಸ್ಯೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಭಾರತದ ಜೊತೆ ಪ್ರಾಮಾಣಿಕವಾಗಿ ಮಾತುಕತೆ ಮಾಡೋಕೆ ಬಯಸ್ತೀವಿ ಅಂತ ಹೇಳಿದ್ರು. ಕೆಲ ದಿನಗಳ ಹಿಂದೆ ಪಾಕ್‌ನ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕೇಳಲು ಜಿನೇವಾದಲ್ಲಿ ಸಮಾವೇಶ ಒಂದನ್ನ ಶರೀಫ್ ಹೋಸ್ಟ್‌ ಮಾಡಿದ್ರು. ಆದಾದ ಬಳಿಕ UAEಗೆ ಭೇಟಿ ನೀಡಿದ್ರು. ಇದನ್ನೆಲ್ಲಾ ಉಲ್ಲೇಖಿಸಿ ಖಾನ್‌ ಈ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply