ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯುತ್ತಾರ ಮಲ್ಲಿಕಾರ್ಜುನ್‌ ಖರ್ಗೆ?

masthmagaa.com:

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೇನಾದ್ರು ಆದ್ರೆ ಪಕ್ಷದಲ್ಲಿ ಜಾರಿಗೆ ತರಲಾಗಿರೋ ʻಒಬ್ಬ ವ್ಯಕ್ತಿ, ಒಂದು ಹುದ್ದೆʼಯ ಪಾಲಿಸಿಯನ್ನ ಉಲ್ಲಂಘನೆ ಮಾಡಿದಂತಾಗುತ್ತೆ. ಕಳೆದ ಬಾರಿ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ವಿಚಾರದಲ್ಲಿ ರಾಹುಲ್‌ ಗಾಂಧಿ ʻOne Person, One Postʼ ಅಂತ ಒತ್ತಿ ಹೇಳಿದ್ರು. ಆದ್ರೆ ಸೋನಿಯಾ ಗಾಂಧಿ ನಾಳೆ ಸಭೆ ಕರೆದಿದ್ದು ಕೇವಲ ಖರ್ಗೆ, ಜೈರಾಮ್‌ ರಮೇಶ್‌ ಮತ್ತು ಕೆಸಿ ವೇಣುಗೋಪಾಲ್‌ರನ್ನ ಇನ್ವೈಟ್‌ ಮಾಡಿದ್ದಾರೆ. ರಾಜ್ಯಸಭಾ ವಿರೋಧ ಪಕ್ಷದ ನಾಯಕ ಆಕಾಂಕ್ಷಿಗಳಾದ ದಿಗ್ವಿಜಯ್‌ ಸಿಂಗ್‌ ಮತ್ತು ಪಿ ಚಿದಂಬರಂ ಅವ್ರನ್ನ ಕರೆದಿಲ್ಲ. ಹಾಗಾಗಿ ಖರ್ಗೆ ಆ ಸ್ಥಾನದಲ್ಲಿ ಬಹುತೇಕ ಮುಂದುವರೆಯಲಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply