ಮಂಡ್ಯದ ಹನುಮ ಧ್ವಜ ದಂಗಲ್: ಪಂಚಾಯ್ತಿಯ ನಡಾವಳಿ ಬುಕ್ ನಾಪತ್ತೆ!

masthmagaa.com:

ರಾಜ್ಯದಲ್ಲಿ ಮಂಡ್ಯದ ಹನುಮ ಧ್ವಜ ವಿವಾದ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ತಿದೆ. ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿ ಪಕ್ಷಭೇದ ಮರೆತು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಬೆಂಬಲಿತ ಕೆರಗೋಡು ಗ್ರಾ.ಪಂ ಸದಸ್ಯರು ಹನುಮ ಧ್ವಜ ಸ್ತಂಭಕ್ಕೆ ಬೆಂಬಲ ಸೂಚಿಸಿದ್ರು. ಈ ಬಗ್ಗೆ ಜನವರಿ 25ರಂದು ಹೊರಡಿಸಲಾಗಿದ ಪಂಚಾಯಿತಿ ನಡಾವಳಿ ಬುಕ್‌ ಇದೀಗ ನಾಪತ್ತೆಯಾಗಿದೆ ಅಂತ ತಿಳಿದು ಬಂದಿದೆ. ಈ ಮೂಲಕ ಈಗ ಈ ಗಲಾಟೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇನ್ನೊಂದ್ಕಡೆ ಸಚಿವ ಎನ್​ ಚಲುವರಾಯಸ್ವಾಮಿಯ ಆರೋಪಗಳಿಗೆ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಧ್ವಜ ತೆರವು ವಿಚಾರವಾಗಿ ಸರ್ಕಾರವೇ ನಕಲಿ ದಾಖಲೆ ಸೃಷ್ಟಿಸಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಕೆರಗೋಡಿನ ಬಸ್ ನಿಲ್ದಾಣದ ಧ್ವಜಸ್ತಂಭ ಸ್ಥಾಪನೆಗೆ ಮನವಿ ಮಾಡಿದ್ದ ಗೌರಿ ಶಂಕರ್ ಸೇವಾ ಟ್ರಸ್ಟ್, ಯಾವ ಧ್ವಜ ಅಂತ ಹೇಳಿರಲಿಲ್ಲ. ಅದಕ್ಕೆ ಅನುಮತಿ ನೀಡಲಾಗಿತ್ತು. ಈಗ ಸರ್ಕಾರವೇ ನಕಲಿ ದಾಖಲೆ ಸರ್ಕಾರ ಸೃಷ್ಟಿ ಮಾಡಿಕೊಂಡು ಆರೋಪ ಮಾಡುತ್ತಿದೆ ಅಂತ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇವೆಲ್ಲದರ ನಡುವೆ ಇದ್ರ ಮಧ್ಯೆ ಮಂಡ್ಯ ಕಾಂಗ್ರೆಸ್​ ಶಾಸಕ ರವಿ ಗಾಣಿಗ ಸಹ ಬಿಜೆಪಿ ಮತ್ತು ಜೆಡಿಎಸ್​ಗೆ ಟಕ್ಕರ್ ನೀಡಲು ತಿರಂಗ ನಡಿಗೆ ಯಾತ್ರೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಶಾಂತಿ ಯಾತ್ರೆ ದಿನಾಂಕ ಘೋಷಣೆ ಮಾಡ್ತೇನೆ ಅಂತ ರವಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply