ಪ್ರೀತಿಸಿ ಪರಾರಿಯಾದ ಜೋಡಿಯನ್ನು ಹತ್ಯೆಗೈದ ಮಾವೋವಾದಿಗಳು!

masthmagaa.com:

ಚತ್ತೀಸ್​ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ತಮ್ಮ ಕೇಡರ್​​ನ ಮೂವರು ಸದಸ್ಯರನ್ನು ಹೊಡೆದುರುಳಿಸಿದ್ದಾರೆ. ಮಾವೋವಾದಿ ಕಮಾಂಡರ್ ಆಗಿದ್ದ ಕಮ್ಲು ಪುನೆಮ್ ಮತ್ತು ಕಮಾಂಡರ್ ಮಂಗಿ ಪರಸ್ಪರ ಪ್ರೀತಿಸ್ತಿದ್ರು. ಹೀಗಾಗಿ ಮದುವೆ ಮಾಡಿಕೊಳ್ಳೋ ಪ್ಲಾನ್ ಮಾಡ್ಕೊಂಡು, ತಮ್ಮ ಗುಂಪಿನಿಂದ ಎಸ್ಕೇಪ್ ಆಗಿದ್ರು. ಆದ್ರೆ ನಂತರದಲ್ಲಿ ಮಾವೋವಾದಿಗಳಿಗೆ ಸಿಕ್ಕಿಬಿದ್ದಿದ್ರು. ನಂತರ ಜನ್ ಅದಾಲತ್ ನಡೆಸಿದ ಮಾವೋವಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇವರಲ್ಲಿ ಕಮ್ಲು ಪನೆಮ್ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದ್ರೆ, ಮಂಗಿ ಮೂರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ರು. ಮೃತಪಟ್ಟ ಮೂರನೇ ವ್ಯಕ್ತಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ..

-masthmagaa.com

Contact Us for Advertisement

Leave a Reply