IT ಕಂಪನಿಗಳನ್ನ ಸೆಳೆಯೋಕೆ ಮುಂದಾದ ಕೇರಳಕ್ಕೆ MBP ಪಂಚ್!

masthmagaa.com:

ಬೆಂಗಳೂರಿನ ನೀರಿನ ಸಮಸ್ಯೆ ಕೇರಳ ಹಾಗೂ ಕರ್ನಾಟಕ ನಡುವೆ ವಾಗ್ಯುದ್ದಕ್ಕೆ ಕಾರಣವಾಗಿದೆ. ಇತ್ತೀಚಿಗೆ ʻಬೆಂಗಳೂರಲ್ಲಿ ನೀರು ಇಲ್ಲ. ಹೀಗಾಗಿ ನಾವು ನೀರು ಕೊಡ್ತೀವಿ. ಐಟಿ ಕಂಪಿನಿಗಳು ಇಲ್ಲಿಗೆ ಬರಬೇಕು ಅಂತ ಕೇರಳದ ಕೈಗಾರಿಕಾ ಸಚಿವ ಹೇಳಿಕೆ ಕೊಟ್ಟಿದ್ರು. ಕೇರಳ ಸಚಿವರ ಮಾತಿಗೆ ಕರ್ನಾಟಕದ ಬೃಹತ್‌ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಖಂಡಿನೆ ವ್ಯಕ್ತಪಡಿಸಿದ್ದಾರೆ. ʻಇದು ಒಕ್ಕೂಟ ವ್ಯವಸ್ಥೆಗೆ ‍ಒಳ್ಳೆಯದಲ್ಲ..ಬರಗಾಲದಲ್ಲಿ ನೀರಿನ ಕೊರತೆ ಸಹಜವಾಗಿರುತ್ತೆ. ಕೇರಳ ಸೇರಿದಂತೆ ದೇಶದ ಹಲವೆಡೆ ಬರದ ಛಾಯೆ ಆವರಿಸಿದೆ. ಆದ್ರೆ ಕೇರಳದ ಕೈಗಾರಿಕಾ ಸಚಿವ ಪಿ.ರಾಜೀವ್‌ ಬೆಂಗಳೂರಿನಲ್ಲಿ ನೀರಿಲ್ಲ ಅಂತೇಳಿ, ಐಟಿ ಕಂಪನಿಗಳನ್ನ ಕೇರಳಕ್ಕೆ ಬರುವಂತೆ ಹೇಳಿದ್ದು ಆರೋಗ್ಯಕರ ಬೆಳವಣಿಗೆಯಲ್ಲ. ನೀರಿನ ಕೊರತೆ ಇದ್ರೂ ಬೆಂಗಳೂರಿನ ಅನೇಕ ಐಟಿ ಕಂಪನಿಗಳು ಕೇರಳದ ಸಾವಿರಾರು ಜನರಿಗೆ ಕೆಲ್ಸ ನೀಡ್ತಿವೆ. ಅದನ್ನ ಕೇರಳ ಸಚಿವರು ನೆನಪಿನಲ್ಲಿ ಇಟ್ಕೊಬೇಕುʼ ಅಂತ ಟಾಂಗ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply