ʻನಾನು ಧೋನಿ ಸ್ನೇಹಿತರಲ್ಲʼ ಎಂದ ಯುವರಾಜ್‌ ಸಿಂಗ್‌! ಹಾಗಿದ್ರೆ ಮಾಹಿ ಬಗ್ಗೆ ಏನ್‌ ಹೇಳಿದ್ರು ಯುವಿ?

masthmagaa.com:

ನಾನು-ಧೋನಿ ಆತ್ಮೀಯ ಫ್ರೆಂಡ್ಸ್‌ ಅಲ್ಲ, ಕ್ರಿಕೆಟ್‌ನಲ್ಲಿ ಮಾತ್ರ ಫ್ರೆಂಡ್ಸ್‌ ಅಂತ ಟೀಮ್‌ ಇಂಡಿಯಾದ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಓಪನ್‌ ಆಗಿ ಹೇಳಿದ್ದಾರೆ. ಸಂದರ್ಶನ ಒಂದ್ರಲ್ಲಿ ಮಾತನಾಡಿದ ಯುವರಾಜ್‌, ʻಧೋನಿಯ ಜೀವನಶೈಲಿ ನನಗಿಂತ ತುಂಬಾನೇ ಡಿಫರೆಂಟ್‌ ಆಗಿತ್ತು. ಆದ್ರಿಂದ ನಾವು ಯಾವತ್ತೂ ಒಳ್ಳೆ ಸ್ನೇಹಿತರಾಗಿಲ್ಲ. ನಾವು ಕೇವಲ ಕ್ರಿಕೆಟ್‌ನಿಂದ ಮಾತ್ರ ಸ್ನೇಹಿತರಾಗಿದ್ದೇವೆ. ನಾನು ಮತ್ತು ಮಾಹಿ ಮೈದಾನಕ್ಕಿಳಿದಾಗ ನಾವು ನಮ್ಮ ದೇಶಕ್ಕೆ ಶೇ.100ರಷ್ಟು ಗೆಲುವಿನ ಫಲಿತಾಂಶವನ್ನ ನೀಡಿದ್ದೇವೆ. ಆದ್ರೆ ಧೋನಿ ನಾಯಕ​ ಮತ್ತು ನಾನು ಉಪನಾಯಕನಾಗಿದ್ದಾಗ ನಿರ್ಧಾರಗಳಲ್ಲಿ ವ್ಯತ್ಯಾಸಗಳಾಗುತ್ತಿದ್ವು. ಕೆಲವೊಮ್ಮೆ ಅವ್ರ ನಿರ್ಧಾರಗಳು ನನಗೆ ಇಷ್ಟವಾಗ್ತಾ ಇರಲಿಲ್ಲ. ಇನ್ನು ಕೆಲವೊಮ್ಮೆ ನನ್ನ ನಿರ್ಧಾರಗಳು ಅವ್ರಿಗೆ ಇಷ್ಟವಾಗ್ತಾ ಇರಲಿಲ್ಲʼ ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply