ಆನ್‌ಲೈನ್‌ನಲ್ಲಿ ಯುವಕರ ಮೇಲಾಗ್ತಿದ್ದ ದೌರ್ಜನ್ಯದ ಅರಿವಿದ್ರು ಕ್ಯಾರೆ ಅನ್ನದ ಮೆಟಾ ಸಂಸ್ಥೆ!

masthmagaa.com:

ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನ ಪೋಷಕ ಸಂಸ್ಥೆ ʻಮೆಟಾʻಗೆ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಟೀನೇಜ್‌ ಯುವಕ-ಯುವತಿಯರ ಮೇಲೆ ನಡೆಯೊ ದೌರ್ಜನ್ಯ, ಕಿರುಕುಳಗಳ ಬಗ್ಗೆ ಮಾಹಿತಿ ಇತ್ತು. ಆದ್ರೆ ಈ ವಿಷಯಗಳ ಬಗ್ಗೆ ಕ್ರಮ ತಗೊಳ್ಳೋಕೆ ಮೆಟಾ ಆಸಕ್ತಿ ತೋರಿಲ್ಲ ಅಂತ ಮೆಟಾ ಮಾಜಿ ಉದ್ಯೋಗಿ ಒಬ್ರು ಆರೋಪಿಸಿದ್ದಾರೆ. ʻಆರ್ತರೊ ಬೆಜಾರ್‌ʼ ಎಂಬ ಈ ವ್ಯಕ್ತಿ ಅಮೆರಿಕ ಸೆನೇಟ್‌ನ ಕಮಿಟಿ ಒಂದರ ಮುಂದೆ ಈ ಶಾಕಿಂಗ್‌ ವಿಚಾರವನ್ನ ಹೇಳಿದ್ದಾರೆ. ಅಂದ್ಹಾಗೆ ಅಮೆರಿಕದಲ್ಲಿ ಮಕ್ಕಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ಪೋಷಕರು ಕಣ್ಣಿಡೋಕೆ Kids Online Safety Act ಅನ್ನೋ ಕಾಯ್ದೆ ಅಲ್ಲಿನ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಮೆಟಾದ ಅಸಲಿಯತ್ತನ್ನ ಬೆಜಾರ್‌ ಕಮಿಟಿ ಮುಂದಿಟ್ಟಿದ್ದಾರೆ. ಜೊತೆಗೆ 2021ರಲ್ಲೆ ಫೇಸ್‌ಬುಕ್‌ CEO ಮಾರ್ಕ್‌ ಜುಕರ್‌ಬರ್ಗ್‌ಗೆ ಸರ್ವೇ ಒಂದರ ಕುರಿತು ಮೇಲ್‌ ಕಳಿಸಿದ್ದಾಗಿ ಬೆಜಾರ್‌ ಹೇಳಿಕೊಂಡಿದ್ದಾರೆ. ಅದ್ರಲಿ 51% ಇನ್‌ಸ್ಟಾಗ್ರಾಮ್‌ ಯೂಸರ್‌ಗಳು ಕೇವಲ ಒಂದು ವಾರದ ಅವಧಿಯಲ್ಲಿ ಒಮ್ಮೆಯಾದ್ರು ಕೆಟ್ಟ ಅಥ್ವಾ ಹಾನಿಕಾರಕ ಅನುಭವ ಆಗಿದೆ ಅಂತ ಹೇಳಿರೋದಾಗಿ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ರಿಪ್ಲೈ ಮಾಡಿರೊ ಮೆಟಾ ಸಂಸ್ಥೆ “ಪ್ರತಿ ದಿನ ಅಸಂಖ್ಯಾತ ಜನ್ರು ಮೆಟಾ ಒಳಗೆ ಹಾಗೂ ಹೊರಗೆ ಯುವ ಜನರಿಗೆ ಸೇಫ್‌ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಒದಗಿಸೋಕೆ ಕೆಲಸ ಮಾಡ್ತಿದ್ದಾರೆ. ಇನ್ನು ಮುಂದೆಯೂ ಇದು ಕಂಟಿನ್ಯು ಆಗತ್ತೆ ಅಂತ ಹೇಳಿದೆ.

-masthmagaa.com

 

 

Contact Us for Advertisement

Leave a Reply