ಮೋದಿ ‘ಜಮ್ಮು’ ಭೇಟಿ! 32 ಸಾವಿರ ಕೋಟಿ ರೂ ಯೋಜನೆಗೆ ಚಾಲನೆ!

masthmagaa.com:

ಲೋಕಸಭಾ ಚುನಾವಣೆ ಪ್ರಚಾರದ ನಡುವೆ ಇದೀಗ ಪ್ರಧಾನಿ ನರೇಂದ್ರ ಮೋದಿಯವ್ರು ಫೆಬ್ರುವರಿ 20 ರಂದು ಜಮ್ಮು & ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವ್ರು ಸುಮಾರು 32,000 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದ್ರಲ್ಲಿ ಆರೋಗ್ಯ, ಶಿಕ್ಷಣ, ಸಾರಿಗೆ, ಇಂಧನ ಹಾಗೂ ಮೂಲಸೌಕರ್ಯಗಳಂತಹ ಎಲ್ಲಾ ಸೆಕ್ಟರ್‌ಗಳ ಯೋಜನೆಗಳು ಸೇರಿವೆ. ಇನ್ನು ಈ ವೇಳೆ ಕಾಶ್ಮೀರದಲ್ಲಿ ಮೊದಲ ಎಲೆಕ್ಟ್ರಿಕ್‌ ಟ್ರೈನ್‌ಗೆ ಪಿಎಂ ಮೋದಿ ಚಾಲನೆ ನೀಡಿದ್ದಾರೆ. ಜೊತೆಗೆ ಅಲ್ಲಿನ ಸಂಗಲ್ದನ್‌ ಸ್ಟೇಷನ್‌ನಿಂದ ಬಾರಾಮುಲ್ಲಾ ಸ್ಟೇಷನ್‌ವರೆಗೆ ಹೊಸ ಟ್ರೈನ್‌ ಸರ್ವೀಸ್‌ಗೂ ಚಾಲನೆ ನೀಡಿದ್ದಾರೆ. ಅಲ್ದೇ ಹೊಸದಾಗಿ ನೇಮಕಗೊಂಡ ಸುಮಾರು 1,500 ಸರ್ಕಾರಿ ನೌಕರರಿಗೆ ಅಪಾಯಿಂಟ್‌ಮೆಂಟ್‌ ಆರ್ಡರ್‌ಗಳನ್ನ ನೀಡಿದ್ದಾರೆ. ಈ ವೇಳೆ ಅವ್ರು, ʻಜಮ್ಮು & ಕಾಶ್ಮೀರ್‌ ಅಭಿವೃದ್ಧಿಗೆ ತಡೆಯಾಗಿದ್ದ ಆರ್ಟಿಕಲ್‌ 370 ರದ್ದತಿಯಿಂದಾಗಿ ಈಗ ಹೊಸ ಯೋಜನೆಗಳಿಗೆ ಚಾಲನೆ ನೀಡಲು ಸಾಧ್ಯವಾಗಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply