ಮಂಕಿಪಾಕ್ಸ್‌: ಕೇಂದ್ರದ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ!

masthmagaa.com:

ವಿಶ್ವದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆಯಾಗುವಂತೆ ಮಾಡಿ ಈಗ ದೇಶವನ್ನ ಆತಂಕಕ್ಕೆ ದೂಡಿರೋ ಮಂಕಿಪಾಕ್ಸ್‌ ಬಗ್ಗೆ ಎಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ಭಾಗವಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಕಿಪಾಕ್ಸ್ ಖಾಯಿಲೆಯ ಸಿಂಪ್ಟಮ್ಸ್‌ ಇದ್ರೆ, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ರೆ ಅಂಥಾ ವ್ಯಕ್ತಿಗಳು ಏನು ಮಾಡ್ಬೇಕು ಅನ್ನೋದ್ರ ಬಗ್ಗೆ ಕೆಲ ಮಾರ್ಗಸೂಚಿ ಹೊರಡಿಸಿದೆ. ಅತಿಯಾದ ಜ್ವರ, ಚರ್ಮದ ಮೇಲೆ ದದ್ದು ಏಳುವುದು, ಹಾಗೇ ದುಗ್ಧರಸ ಗ್ರಂಥಿ ಹಿರಿದಾಗೋದು. ತಲೆನೋವು, ಮಾಂಸ ಖಂಡಗಳ ನೋವು, ಕೆಮ್ಮು, ಗಂಟಲು ನೋವು ಇತ್ಯಾದಿ ಲಕ್ಷಣಗಳು ಕಂಡು ಬರುತ್ತೆ ಅಂತ ಹೇಳಿದೆ. ಜೊತೆಗೆ ʻಯಾವುದೇ ವ್ಯಕ್ತಿ ಕಳೆದ 21 ದಿನಗಳಲ್ಲಿ ರೋಗಬಾಧಿತ ಅಥವಾ ಶಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ರೆ ಅವರು ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅವರಲ್ಲಿ ಯಾವುದಾದರೂ ರೋಗ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ವೈದ್ಯರ ಸಲಹೆ ಪಡೀಬೇಕು ಅಂತ ಸಲಹೆ ನೀಡಿದೆ.

-masthmagaa.com

Contact Us for Advertisement

Leave a Reply