ಇರಾನ್‌ನಲ್ಲಿ ಮತ್ತೆ ಶುರುವಾಯ್ತು ನೈತಿಕ ಪೊಲೀಸ್‌ಗಿರಿ!

masthmagaa.com:

ಹಿಜಾಬ್‌ ವಿರೋಧಿ ಪ್ರತಿಭಟನೆ ಭುಗಿಲೆದ್ದಿದ್ದ ವೇಳೆ ಸ್ಥಗಿತಗೊಳಿಸಲಾಗಿದ್ದ ನೈತಿಕ ಪೊಲೀಸ್‌ಗಿರಿಯನ್ನ ಇರಾನ್‌ ಮತ್ತೆ ಪ್ರಾರಂಭಿಸಿದೆ. ಕಡ್ಡಾಯವಾಗಿ ಹಿಜಾಬ್‌ ಧರಿಸುವ ಕಾನೂನನ್ನ ಜಾರಿಗೊಳಿಸಲು ಪೊಲೀಸರು ಗಸ್ತು ತಿರುಗಲಿದ್ದಾರೆ ಅಂತ ಇರಾನ್‌ ಕಾನೂನು ಜಾರಿ ಪಡೆಯ ವಕ್ತಾರರೊಬ್ರು ಹೇಳಿದ್ದಾರೆ. ಹಿಜಾಬ್‌ ಹಾಗೂ ಇತರ ಡ್ರೆಸ್‌ ಕೋಡ್‌ಗಳನ್ನ ಸರಿಯಾಗಿ ಪಾಲಿಸದವ್ರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಾರೆ. ಇದೇ ವೇಳೆ ನಿಯಮಗಳನ್ನ ಉಲ್ಲಂಘನೆ ಮಾಡುವ ಮಹಿಳೆಯರನ್ನ ಬಂಧಿಸಿ ಪೊಲೀಸರು ನಡೆಸುತ್ತಿರುವ ರೀ ಎಜುಕೇಶನ್‌ ಸೆಂಟರ್‌ಗಳಿಗೆ ಕರೆದುಕೊಂಡು ಹೋಗಬಹುದು ಅಂತ ತಿಳಿಸಲಾಗಿದೆ. ಅಂದ್ಹಾಗೆ ಕಳೆದ ವರ್ಷ ಡ್ರೆಸ್‌ ಕೋಡ್‌ ಪಾಲಿಸಿಲ್ಲ ಅಂತ ಬಂಧಿಸಲಾಗಿದ್ದ ಮಹ್ಸಾ ಅಮಿನಿ ಅನ್ನೊ ಯುವತಿ ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ಮೃತಪಟ್ಟಿದ್ರು. ಬಳಿಕ ಇರಾನ್‌ನಲ್ಲಿ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಈ ಹಿನ್ನಲೆಯಲ್ಲಿ ನೈತಿಕ ಪೊಲೀಸ್‌ಗಿರಿಯನ್ನ ನಿಲ್ಲಿಸಿದ್ದ ಇರಾನ್‌ ಇದೀಗ ಮತ್ತೆ ಪ್ರಾರಂಭಿಸಿರೋದಾಗಿ ಹೇಳಿದೆ.

-masthmagaa.com

Contact Us for Advertisement

Leave a Reply