RSS ನಾಯಕ ರುದ್ರೇಶ್‌ ಹತ್ಯೆ ರುವಾರಿ‌ ಸೌತ್ ಆಫ್ರಿಕಾದಲ್ಲಿ ಅರೆಸ್ಟ್!

masthmagaa.com:

ನಿಷೇಧಿತ ಪಾಪುಲರ್‌ ಫ್ರಂಟ್‌ ನಾಯಕ ಹಾಗೂ ಬೆಂಗಳೂರಿನಲ್ಲಿ RSS ನಾಯಕ ರುದ್ರೇಶ್‌ ಹತ್ಯೆ ಆರೋಪಿ ಮೊದಮದ್‌ ಗೌಸ್‌ ನಿಯಾಸಿ ಅರೆಸ್ಟ್‌ ಆಗಿದ್ದಾನೆ. ಈ ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ನನ್ನ NIA ಸೌತ್‌ ಆಫ್ರಿಕಾದಲ್ಲಿ ಅರೆಸ್ಟ್‌ ಮಾಡಿದೆ. NIA ಈ ಹೈ ಪ್ರೊಫೈಲ್‌ ಟಾರ್ಗೆಟ್‌ ಮೇಲೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. 2016ರಲ್ಲಿ ಬೆಂಗಳೂರಿನಲ್ಲಿ ಈತ RSS ನಾಯಕ ರುದ್ರೇಶ್‌ನನ್ನ ಹತ್ಯೆ ಮಾಡಿ ತಲೆಮರಸಿಕೊಂಡಿದ್ದ. ಗುಜರಾತ್‌ನ ಆಂಟಿ ಟೆರರಿಸ್ಮ್‌ ಸ್ಕ್ವಾಡ್‌ ಈತನನ್ನ ಟ್ರ್ಯಾಕ್‌ ಮಾಡಿ ಮಹತ್ವದ ಮಾಹಿತಿಗಳನ್ನ NIAಗೆ ನೀಡಿತ್ತು. ನಂತರ ಸೌತ್‌ ಆಫ್ರಿಕಾದ ಅಧಿಕಾರಿಗಳನ್ನ ಅಲರ್ಟ್‌ ಮಾಡಿ ಅವರದೇ ನೆಲದಲ್ಲಿ ಈತನನ್ನ ಅರೆಸ್ಟ್‌ ಮಾಡಿಸಲಾಗಿದೆ. ನಂತರ ಅತಿ ವೇಗದಲ್ಲಿ ಹಸ್ತಾಂತರ ಪ್ರಕ್ರಿಯೆಗಳು ನಡೆದು ಈತನನ್ನ ಈಗಾಗ್ಲೆ ಮುಂಬೈಗೆ ಕರೆತರಲಾಗ್ತಿದೆ. ಅಲ್ಲಿ ಈತನ ಕೇಸ್‌ನ ವಿಚಾರಣೆ ನಡೆಯಲಿದೆ.

-masthmagaa.com

Contact Us for Advertisement

Leave a Reply