ತಮ್ಮ ಮಾಜಿ ಬಿಸ್‌ನೆಸ್‌ ಪಾರ್ಟನರ್ಸ್‌ ವಿರುದ್ಧ ಕೇಸ್‌ ಹಾಕಿದ ಧೋನಿ!

masthmagaa.com:

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ತಮ್ಮ ಇಬ್ಬರು ಮಾಜಿ ಬಿಸ್‌ನೆಸ್‌ ಪಾರ್ಟನರ್‌ಗಳ ವಿರುದ್ಧ ಕೇಸ್‌ ಹಾಕಿದ್ದಾರೆ. ಅರ್ಕಾ ಸ್ಪೋರ್ಟ್ಸ್‌ & ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ನ ಮಿಹಿರ್‌ ದಿವಾಕರ್‌ ಮತ್ತು ಸೌಮ್ಯ ವಿಶ್ವಾಸ್‌ ಅವ್ರಿಂದ 15 ಕೋಟಿ ರೂಪಾಯಿ ಮೋಸ ಆಗಿದೆ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ ದಿವಾಕರ್‌ ಅವ್ರು 2017ರಲ್ಲಿ ಧೋನಿ ಅವ್ರೊಂದಿಗೆ ಜಾಗತಿಕ ಕ್ರಿಕೆಟ್‌ ಅಕಾಡೆಮಿ ಸ್ಥಾಪಿಸೋಕೆ ಒಪ್ಪಂದ ಮಾಡ್ಕೊಂಡಿದ್ರು. ಆದ್ರೆ ದಿವಾಕರ್‌ ಅವ್ರು ಅಗ್ರೀಮೆಂಟ್‌ನಲ್ಲಿ ಇರೋ ಷರತ್ತುಗಳನ್ನ ಪಾಲಿಸಲಿಲ್ಲ. ಹಲವು ಬಾರಿ ಒಪ್ಪಂದದಲ್ಲಿ ಉಲ್ಲೇಖಿಸಿದ್ದ ನಿಯಮಗಳು ಮತ್ತು ಷರತ್ತುಗಳನ್ನ ತಿರಸ್ಕರಿಸಿದ್ರು. ಧೋನಿ ಕೂಡ ಸಾಕಷ್ಟು ಬಾರಿ ಲೀಗಲ್‌ ನೋಟಿಸ್‌ ಕಳಿಸಿದ್ರು. ಆದ್ರೆ ಯಾವ್ದೇ ರೀತಿ ಪ್ರಯೋಜನವಾಗಿಲ್ಲ. ಆದ್ರಿಂದ ಇದೀಗ ಧೋನಿ ಇವರಿಬ್ರ ಮೇಲೆ ಕ್ರಿಮಿನಲ್‌ ಕೇಸ್‌ ಫೈಲ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply