ರನ್‌ವೇನಲ್ಲಿ ಕೂತು ಊಟ ಮಾಡಿದ ಪ್ರಯಾಣಿಕರು: ಇಂಡಿಗೊಗೆ ನೋಟಿಸ್

masthmagaa.com:

ಪ್ರಯಾಣಿಕರು ರನ್‌ವೇನಲ್ಲಿ ಕೂತು ಊಟ ಮಾಡಿದ ವಿಚಾರವಾಗಿ ಇಂಡಿಗೋ ಏರ್‌ಲೈನ್ಸ್‌ ಹಾಗೂ ಮುಂಬೈ ಏರ್‌ಪೋರ್ಟ್‌ಗೆ ನಾಗರೀಕ ವಿಮಾನಯಾನ ಸಚಿವ ಶೋಕಾಸ್‌ ನೋಟೀಸ್‌ ನೀಡಿದೆ. ಗೋವಾದಿಂದ ಮುಂಬೈಗೆ ಹೋಗ್ತಿದ್ದ ವಿಮಾನ ಫಾಗ್‌ ಸಮಸ್ಯೆಯಿಂದ ಮುಂಬೈಗೆ ಡೈವರ್ಟ್‌ ಆಗಿತ್ತು. ಮುಂಬೈನಲ್ಲಿ ಏಪ್ರಾನ್‌ ಸಮೇತ ಕೆಳಗಿಳಿಸಿ, ರನ್‌ವೇನಲ್ಲೇ ರಾತ್ರಿ ಊಟ ಮಾಡಿಸಿ, ಬೇರೊಂದು ವಿಮಾನಕ್ಕೆ ಸೆಕ್ಯುರಿಟಿ ಸ್ಕ್ರೀನಿಂಗ್‌ ನಡೆಸದೇ ಬೋರ್ಡ್‌ ಮಾಡಿಸಲಾಗಿದೆ. ಹೀಗಾಗಿ ಭದ್ರತಾ ಮಾನದಂಡಗಳು ಹಾಗೂ ಕಾರ್ಯಾಚರಣೆ ಸಮಸ್ಯೆಗಳನ್ನ ಏರ್‌ಲೈನ್ಸ್‌ ಸಂಸ್ಥೆ ಹಾಗೂ ಏರ್‌ಪೋರ್ಟ್‌ ಆಡಳಿತ ಕಡೆಗಣಿಸಿವೆ. ಪ್ರಯಾಣಿಕರಿಗೆ ಮೂಲ ಸೌಕರ್ಯಗಳನ್ನ ಒಡಗಿಸುವಲ್ಲಿ ಫೇಲಾಗಿವೆ. ಈ ಬಗ್ಗೆ ಸರಿಯಾದ ಕಾರಣಗಳಿರೋ ರಿಪೋರ್ಟ್‌ ಕೊಡ್ಬೇಕು ಅಂತ ಸಚಿವಾಲಯ ರಿಪೋರ್ಟ್‌ ನೀಡಿದೆ.

ಇನ್ನೊಂದು ಕಡೆ ದೆಹಲಿಯಿಂದ ಗೋವಾಗ ಹೋರಟಿದ್ದ ಇಂಡಿಗೋ ವಿಮಾನದಲ್ಲಿ ವ್ಯಕ್ತಿಯೊಬ್ಬ ಪೈಲಟ್‌ ಮೇಲೆ ಹಲ್ಲೆ ಮಾಡಿದ್ದ. ಈ ವ್ಯಕ್ತಿ ಈಗ ಸೋನಲ್‌ ವಿಜ್‌ ಅನ್ನೋ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್‌ ಹಾಕಿ, ಇಂಡಿಗೋ ಏರ್‌ಲೈನ್ಸ್‌ ಮೇಲೆ ಹಲವು ಆರೋಪಗಳನ್ನ ಮಾಡಿದ್ದಾನೆ. ʻಹಿಂಸೆ ಸ್ವೀಕಾರಾರ್ಹ ಅಲ್ಲ ಅನ್ನೋದು ನಿಜ. ಆದ್ರೆ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಟ್ಟದಾಗಿ ನಿರ್ವಹಣೆ ಮಾಡಲಾಗ್ತಿದೆ. ಬೆಳಿಗ್ಗೆ 7:40ಕ್ಕೆ ಹೊರಬೇಕಾದ ವಿಮಾನಕ್ಕೆ ಮಧ್ಯಾಹ್ನ 12:20ಕ್ಕೆ ಬೋರ್ಡಿಂಗ್‌ ಶುರುವಾಯ್ತು. ನಂತರ 5:35ರವರೆಗೂ ವಿಮಾನ ಹೊರಡ್ಲಿಲ್ಲ. ಸಣ್ಣ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲಾ 186 ಪ್ರಯಾಣಿಕರು ಊಟ ಇಲ್ಲದೆ ಪರದಾಡ್ತಿದ್ರು ಅಂದಿದ್ದಾನೆ.

-masthmagaa.com

Contact Us for Advertisement

Leave a Reply