ಪಾಕ್‌ ಗುಪ್ತಚರರಿಗೆ ಸಹಾಯ ಮಾಡ್ತಿದ್ದ ಭಾರತೀಯನ ಬಂಧನ!

masthmgaa.com:

ಮುಂಬೈನ ಮಜಗಾಂವ್‌ ಬಂದರಿನಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ಪಾಕ್‌ನ ಸ್ಪೈ ಆಗಿನೂ ಕೆಲಸ ಮಾಡ್ತಿದ್ದು, ಇದೀಗ ಪೊಲೀಸರು ಈತನನ್ನ ಅರೆಸ್ಟ್‌ ಮಾಡಿದ್ದಾರೆ. ಈತ ಪಾಕಿಸ್ತಾನದ ಗುಪ್ತಚರರಿಗೆ ಭಾರತದ ಕೆಲ ಸೂಕ್ಷ್ಮ ಮಾಹಿತಿಗಳನ್ನ ಲೀಕ್‌ ಮಾಡಿದ್ದ ಅಂತ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಆರೋಪಿಸಿದೆ. ಈತ ಸೋಶಿಯಲ್‌ ಮೀಡಿಯಾದಲ್ಲಿ ಪಾಕಿಸ್ತಾನಿ ಮಹಿಳಾ ಏಜೆಂಟ್‌ ಬಲೆಗೆ ಬಿದ್ದು, ಈ ಕೆಲಸ ಮಾಡಿದ್ದಾನೆ ಅಂತ ತನಿಖೆ ವೇಳೆ ಗೊತ್ತಾಗಿದೆ. ಇದೀಗ ಇವ್ರಿಬ್ಬರ ಮೇಲೂ ಕೇಸ್‌ ದಾಖಲಿಸಲಾಗಿದೆ. ಸದ್ಯ ಯಾವ್‌ ರೀತಿಯ ಸೂಕ್ಷ್ಮ ಮಾಹಿತಿಗಳನ್ನ ಈತ ಪಾಕಿಸ್ತಾನಿ ಏಜೆಂಟ್‌ಗೆ ಪಾಸ್‌ ಮಾಡಿದ್ದಾನೆ ಅನ್ನೋ ಬಗ್ಗೆ ಅಧಿಕಾರಿಗಳು ರಿವೀಲ್‌ ಮಾಡಿಲ್ಲ. ಆದ್ರೆ ತನಿಖೆ ನಡೀತಾ ಇದೆ ಅಂತ ಮಾತ್ರ ಹೇಳಿದ್ದಾರಷ್ಟೆ.

-masthmagaa.com

Contact Us for Advertisement

Leave a Reply