ಮುಸ್ಲಿಮರು ತಮ್ಮ ದೇಶ, ನೆಲಕ್ಕೆ ನಿಷ್ಠರಾಗಿ ಇರಬೇಕು: ವಿಶ್ವ ಮುಸ್ಲಿಂ ಸಮುದಾಯ ಸಮಿತಿ

masthmagaa.com:

ಮುಸ್ಲಿಮರು ತಮ್ಮ ತಮ್ಮ ದೇಶಕ್ಕೆ ನಿಷ್ಠರಾಗಿ ಇರ್ಬೇಕು. ಮೂಲಭೂತವಾದಿಗಳಿಂದ ದಾರಿ ತಪ್ಪಬಾರದು ಅಂತ ಈಜಿಪ್ಟ್‌ನ ಧಾರ್ಮಿಕ ವ್ಯವಹಾರಗಳ ಮಂತ್ರಿ ಡಾ. ಮೊಹಮ್ಮದ್‌ ಮುಖ್ತರ್‌ ಗೊಮಾ ಹೇಳಿದ್ದಾರೆ. ಯುಎಇಯಲ್ಲಿ ವಿಶ್ವ ಮುಸ್ಲಿಂ ಸಮುದಾಯಗಳ ಸಮಿತಿ(TWMCC) ನಾಲ್ಕನೇ ವಾರ್ಷಿಕ ಸಮ್ಮೇಳನವನ್ನ ಆಯೋಜಿಸಿತ್ತು. ಇದ್ರಲ್ಲಿ ಸುಮಾರು 150 ದೇಶಗಳಿಂದ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ವಲಯದ 500 ಮುಸ್ಲಿಂ ನಾಯಕರು ಭಾಗವಹಿಸಿದ್ದರು. ಈ ವೇಳೆ ಮಾತಾಡಿದ ಮೊಹಮ್ಮದ್‌ ಗೊಮಾ ಅವ್ರು, ಮುಸ್ಲಿಂ ಜಗತ್ತು ಈಗ ಕೆಟಗಿಯಲ್ಲಿ ಇಬ್ಭಾಗ ಆಗಿದೆ. ಒಂದು ಲಾಜಿಕಲ್‌ ಅಥ್ವಾ ತಾರ್ಕಿಕ ಜಗತ್ತು. ಇನ್ನೊಂದು ಇಮ್ಯಾಜಿನರಿ. ಈ ಇಮ್ಯಾಜಿನರಿ ಜಗತ್ತನ್ನ ತೀವ್ರಗಾಮಿಗಳು ಮತ್ತು ಭಯೋತ್ಪಾದಕರು ಮಿಸ್‌ಯೂಸ್‌ ಮಾಡ್ಕೋತಾ ಇದ್ದಾರೆ. ಇಡೀ ಮುಸ್ಲಿಂ ಜಗತ್ತು ಒಂದೇ ದೇಶದಲ್ಲಿ ಒಂದೇ ಬಾವುಟದ ಅಡಿ ಇರ್ಬೇಕು ಅನ್ನೋದು ಅಸಾಧ್ಯವಾದುದು. ಎಲ್ರು ತಮ್‌ ತಮ್ಮ ದೇಶ, ನೆಲಕ್ಕೆ ನಿಷ್ಠರಾಗಿ ಇರ್ಬೇಕು. ಅದನ್ನೇ ಇಸ್ಲಾಂ ಕೂಡ ಹೇಳೋದು. ಕುರಾನ್‌ ಹೇಗಿದೆ ಹಾಗೆ ಅರ್ಥ ಮಾಡ್ಕೋಬೇಕು. ಭಯೋತ್ಪಾದಕರು ಹೇಳಿದಂತೆ ಅಲ್ಲ ಅಂತ ಹೇಳಿದ್ದಾರೆ. ಜೊತೆಗೆ ಫತ್ವಾಗಳನ್ನ ಸಮಯ, ಸಂದರ್ಭ, ಸ್ಥಳ ನೋಡ್ಕೊಂಡು ಹೊರಡಿಸ್ಬೇಕು ಇಲ್ಲಾಂದ್ರೆ ಅದಕ್ಕೆ ಅರ್ಥ ಇರಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply