ಸ್ಪೇನ್‌ ಫಿಫಾ ವರ್ಲ್ಡ್‌ಕಪ್‌ ಗೆಲುವಿನ ಸಂಭ್ರಮ: ಮಹಿಳಾ ಆಟಗಾರರಿಗೆ ಚುಂಬಿಸಿದ ಫುಟ್‌ಬಾಲ್‌ ಫೆಡರೇಶನ್‌ ಮುಖ್ಯಸ್ಥ

masthmagaa.com:

ಇತ್ತೀಚೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಫಿಫಾ ಮಹಿಳಾ ವಿಶ್ವಕಪ್‌ ಫೈನಲ್‌ನಲ್ಲಿ ಸ್ಪೇನ್‌ ಇಂಗ್ಲೆಂಡನ್ನ ಮಣಿಸಿ ಚಾಂಪಿಯಾನ್‌ ಆಗಿ ಹೊರಹೊಮ್ಮಿತ್ತು. ಈ ವೇಳೆ ಗೆಲುವನ್ನ ಸಂಭ್ರಮಿಸುತ್ತಿದ್ದ ಸ್ಪೇನ್‌ನ ಫುಟ್‌ಬಾಲ್‌ ಫೆಡರೇಷನ್‌ನ ಮುಖ್ಯಸ್ಥ ಲೂಯಿಸ್‌ ರುಬಿಯಾಲ್ಸ್‌ ಅವ್ರು ಮಹಿಳಾ ಆಟಗಾರರಿಗೆ ಮುತ್ತುಕೊಟ್ಟಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸ್ಪೇನ್‌ ಮಹಿಳಾ ಫುಟ್‌ಬಾಲ್‌ ಟೀಂ, ಲೂಯಿಸ್‌ ಅವ್ರು ಕ್ಷಮೆ ಕೇಳಬೇಕು. ಜೊತೆಗೆ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿಯಬೇಕು ಅಂತ ಆಗ್ರಹಿಸಿದ್ದು, ಅವರು ರಿಸೈನ್‌ ಮಾಡೋವರೆಗೂ ಪ್ರತಿಭಟನೆ ನಡೆಸೋದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲೂಯಿಸ್‌, ನಾನು ರಾಜೀನಾಮೆ ಕೊಡಲ್ಲ ಎಂದಿದ್ದಾರೆ. ಜೊತೆಗೆ ಫೇಕ್‌ ಫೆಮಿನಿಸ್ಟ್‌ಗಳು ನನ್ನನ್ನ ಬಲಿಪಶು ಮಾಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply