ಪಾಕ್‌ ನಂಬಿ ಮಯಾನ್ಮಾರ್‌ಗೆ ಸಂಕಷ್ಟ! ʼಪಾಕ್‌ ವಿಮಾನಗಳು ಠುಸ್ʼ!

masthmagaa.com:

ಪಾಕಿಸ್ತಾನದಿಂದ ಖರೀದಿ ಮಾಡಿದ್ದ ಫೈಟರ್‌ಜೆಟ್‌ಗಳು ಕಾರ್ಯಾಚರಣೆಗೆ ಫಿಟ್‌ ಆಗಿಲ್ಲ ಅಂತ ಸೇನಾ ಆಡಳಿತವಿರುವ ಮಯನ್ಮಾರ್‌ ಆರೋಪಿಸಿದೆ. ಪಾಕಿಸ್ತಾನ ಹಾಗೂ ಚೀನಾ ಜಂಟಿಯಾಗಿ ನಿರ್ಮಿಸಿದ JF-17 ಫೈಟರ್‌ಜೆಟ್‌ಗಳನ್ನ 2019-21ರಲ್ಲಿ ಮಯನ್ಮಾರ್‌ ಖರೀದಿಸಿತ್ತು. ಇದೀಗ ತಾಂತ್ರಿಕ ದೋಷದಿಂದಾಗಿ ಒಟ್ಟು 11 ಫೈಟರ್‌ಜೆಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಮಯನ್ಮಾರ್‌ ಜುಂಟಾ ಮುಖ್ಯಸ್ಥ ಜನರಲ್‌ ಮಿನ್‌ ಆಂಗ್‌ ಹ್ಲೈಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಫೈಟರ್‌ಜೆಟ್‌ಗಳಲ್ಲಿ ಉಂಟಾಗಿದ್ದ ಸಮಸ್ಯೆಗಳನ್ನ ಪರಿಹರಿಸೋಕೆ ಪಾಕಿಸ್ತಾನದ ಇಂಜಿನಿಯರ್‌ಗಳು ಮಯನ್ಮಾರ್‌ಗೆ ಭೇಟಿ ಕೊಟ್ಟಿದ್ದರು. ಹೀಗಿದ್ರು ಪ್ರಸ್ತುತ ಈ ಯುದ್ಧ ವಿಮಾನಗಳು ಸರಿಯಾಗ ಕೆಲಸ ಮಾಡ್ತಿಲ್ಲ. ಇದ್ರಿಂದ ಮಯನ್ಮಾರ್‌ ವಾಯುಸೇನೆಗೆ ಪ್ರಮುಖ ಕಾರ್ಯಾಚರಣೆಗಳನ್ನ ಕೈಗೊಳ್ಳಲು ಕಷ್ಟವಾಗ್ತಿದೆ ಅಂತ ತೀವ್ರ ಅಸಮಾಧಾನಗೊಂಡಿರುವ ಮಯನ್ಮಾರ್‌, ಪಾಕಿಸ್ತಾನಕ್ಕೆ ಮೆಸೇಜ್‌ ಕಳಿಸಿ ಉತ್ತರಿಸುವಂತೆ ಹೇಳಿದೆ. ಜೊತೆಗೆ ಈ ವಿಚಾರದಲ್ಲಿ ಚೀನಾದ ಮಧ್ಯಸ್ಥಿಗೆ ಸೇನೆ ಪ್ರಯತ್ನಪಡ್ತಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಂದ್ಹಾಗೆ ಪಾಕಿಸ್ತಾನ ತನ್ನ JF-17 ಫೈಟರ್‌ಜೆಟ್‌ಗಳನ್ನ ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಿಗೆ ಮಾರಾಟ ಮಾಡ್ಬೇಕು ಅಂತ ಟ್ರೈ ಮಾಡ್ತಿದ್ದು, ಯಾರು ಕೂಡ ಖರೀದಿಸಲು ಮುಂದೆ ಬರ್ತಿಲ್ಲ ಎನ್ನಲಾಗ್ತಿದೆ. ಅಷ್ಟೆ ಅಲ್ದೆ ಚೀನಾನು ಸೇರಿ ನಿರ್ಮಿಸಿರೋ ಈ ಜೆಟ್‌ಗಳನ್ನ ಸ್ವತಃ ಚೀನಾ ಇಲ್ಲಿಯವರೆಗೂ ತನ್ನ ವಾಯುಪಡೆಯಲ್ಲಿ ಫ್ಲೀಟ್‌ನಲ್ಲಿ ಒಂದೇ ಒಂದು JF-17 ಫೈಟರ್‌ಜೆಟ್‌ಗಳನ್ನ ಹೊಂದಿಲ್ಲ.

-masthmagaa.com

Contact Us for Advertisement

Leave a Reply